ಕಾಂಗ್ರೆಸ್ ಕಾಲದ ಹಗರಣ: ‘ಸ್ಕ್ಯಾಮ್‌ ರಾಮಯ್ಯʼ ಪುಸ್ತಕ ಬಿಡುಗಡೆ ಮಾಡಿದ ಬಿಜೆಪಿ

Spread the love

ಕಾಂಗ್ರೆಸ್ ಕಾಲದ ಹಗರಣ: ‘ಸ್ಕ್ಯಾಮ್‌ ರಾಮಯ್ಯʼ ಪುಸ್ತಕ ಬಿಡುಗಡೆ ಮಾಡಿದ ಬಿಜೆಪಿ
 

ಬೆಂಗಳೂರು: ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಅನೇಕ ಹಗರಣಗಳು ನಡೆದಿವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಕಾಲದ ಹಲವು ಹಗರಣಗಳ ಕುರಿತಾದ ‘ಸ್ಕ್ಯಾಮ್‌ ರಾಮಯ್ಯʼ ಪುಸ್ತಕ ಬಿಡುಗಡೆ ಮಾಡಿದ ಬಳಿಕ ಅವರು ಮಾತನಾಡಿದರು.

‘ನಮ್ಮ ಸರ್ಕಾರದ (ಬಿಜೆಪಿ) ಅಭಿವೃದ್ಧಿ ಕಾರ್ಯಗಳಿಂದ ಕಂಗೆಟ್ಟಿರುವ ಸಿದ್ದರಾಮಯ್ಯ ಅವರು ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಅವರು ಸಿಎಂ‌ ಆಗಿದ್ದಾಗ ನಡೆದ ಹಗರಣ, ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಕ್ರಮಗಳ ಸರಮಾಲೆಯನ್ನು ಸಾರ್ವಜನಿಕರ ಮುಂದೆ ಇಟ್ಟು, ವಾಸ್ತವವನ್ನು ತಿಳಿಸುವ ಹೊತ್ತಗೆಯನ್ನು ಬಿಡುಗಡೆ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್, ವಿಧಾನ ಪರಿಷತ್‌ ಸದಸ್ಯ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.


Spread the love

Leave a Reply

Please enter your comment!
Please enter your name here