Home Mangalorean News Kannada News ಕಾಂಗ್ರೆಸ್ ನಾಯಕ, ಮಾಜಿ ತಾಪಂ ಸದಸ್ಯ ಉಮೇಶ್ ನಾಯ್ಕ್ ಚೇರ್ಕಾಡಿ ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆ

ಕಾಂಗ್ರೆಸ್ ನಾಯಕ, ಮಾಜಿ ತಾಪಂ ಸದಸ್ಯ ಉಮೇಶ್ ನಾಯ್ಕ್ ಚೇರ್ಕಾಡಿ ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆ

Spread the love

ಕಾಂಗ್ರೆಸ್ ನಾಯಕ, ಮಾಜಿ ತಾಪಂ ಸದಸ್ಯ ಉಮೇಶ್ ನಾಯ್ಕ್ ಚೇರ್ಕಾಡಿ ಸೇರಿದಂತೆ ಹಲವರು ಬಿಜೆಪಿ ಸೇರ್ಪಡೆ

ಉಡುಪಿ: ಮಾಜಿ ತಾಲೂಕು ಪಂಚಾಯತ್ ಸದಸ್ಯ ಉಮೇಶ್ ನಾಯ್ಕ್ ಚೇರ್ಕಾಡಿ ಸೇರಿದಂತೆ ಹಲವಾರು ಮಂದಿ ಸೋಮವಾರ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.

ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಉಡುಪಿ ಶಾಸಕ ರಘುಪತಿ ಭಟ್ ಹಾಗೂ ಜಿಲ್ಲಾ ಬಿಜೆಪಿಯ ಪದಾಧಿಕಾರಿಗಳು ಪಕ್ಷದ ಧ್ವಜವನ್ನು ನೀಡುವುದರ ಮೂಲಕ ಬಿಜೆಪಿಗೆ ಸ್ವಾಗತ ಕೋರಿದರು.

ಇದೇ ವೇಳೆ ಬ್ರಹ್ಮಾವರ ತಾಲೂಕು ವ್ಯಾಪ್ತಿಯ ವಿವಿಧ ಗ್ರಾಮಪಂಚಾಯತ್ ಗಳ ಕಾಂಗ್ರೆಸ್ ನಾಯಕರಾದ ರಾಘವೇಂದ್ರ ಜೆಪಿ, ಜಯಲಕ್ಷ್ಮೀ ಶೆಟ್ಟಿ, ರಮೇಶ್ ಪೂಜಾರಿ, ಗುರುರಾಜ್ ರಾವ್, ಹೇಮಾ ವಿ, ಸೂರ್ಯ, ಜಯಕರ ಸೇರಿದಂತೆ ಹಲವರು ಬಿಜೆಪಿಗೆ ಸೇರ್ಪಡೆಗೊಂಡರು.

ಈ ವೇಳೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್, ಬಿಜೆಪಿ ನಾಯಕರಾದ ರವಿ ಅಮೀನ್, ಕುತ್ಯಾರು ನವೀನ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version