ಕಾಂಗ್ರೆಸ್ ನಿಂದ ಕರಾವಳಿ ಅಭಿವೃದ್ಧಿಗೆ 10 ಅಂಶಗಳ “ದಶ ಸಂಕಲ್ಪ’ದ ಪ್ರತ್ಯೇಕ ಪ್ರಣಾಳಿಕೆ ಘೋಷಣೆ

Spread the love

ಕಾಂಗ್ರೆಸ್ ನಿಂದ ಕರಾವಳಿ ಅಭಿವೃದ್ಧಿಗೆ 10 ಅಂಶಗಳ “ದಶ ಸಂಕಲ್ಪ’ದ ಪ್ರತ್ಯೇಕ ಪ್ರಣಾಳಿಕೆ ಘೋಷಣೆ

ಮಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಕರಾವಳಿ ಪ್ರದೇಶದ ಸಮಗ್ರ ಅಭಿವೃದ್ಧಿಗಾಗಿ 10 ಅಂಶಗಳ “ದಶ ಸಂಕಲ್ಪ’ದ ಪ್ರತ್ಯೇಕ ಪ್ರಣಾಳಿಕೆಯನ್ನು ರವಿವಾರ ಮಂಗಳೂರಿನಲ್ಲಿ ನಡೆದ ಕಾಂಗ್ರೆಸ್‌ ಪ್ರಜಾ ಧ್ವನಿ ಸಮಾವೇಶದಲ್ಲಿ ಪ್ರಕಟಿಸಲಾಗಿದೆ.ವಿ.ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ಅವರು ಹೊಸ ಪ್ರಣಾಳಿಕೆಯನ್ನು ಘೋಷಿಸಿದರು.

ಕರಾವಳಿ ಪ್ರದೇಶಕ್ಕೆ ಉದ್ಯೋಗಾವಕಾಶ, ಹೂಡಿಕೆ, ಪ್ರವಾಸೋದ್ಯಮ ಹಾಗೂ ಕರಾವಳಿಯಲ್ಲಿ ಸೌಹಾರ್ದಯುತ ಬೆಳವಣಿಗೆಗಾಗಿ “ಕರಾವಳಿ ಅಭಿವೃದ್ಧಿ ಪ್ರಾಧಿಕಾರ’ ರಚಿಸಿ ವಾರ್ಷಿಕ 2,500 ಕೋ.ರೂ. ಮೊತ್ತ ವಿನಿಯೋಗ ಮಾಡಲಾಗುವುದು. ಕರಾವಳಿಯಲ್ಲಿ 1 ಲಕ್ಷ ಉದ್ಯೋಗವಕಾಶ ಕಲ್ಪಿಸುವ ಉದ್ದೇಶದಿಂದ ಮಂಗಳೂರನ್ನು ಐಟಿ ಹಾಗೂ ಗಾರ್ಮೆಂಟ್‌ ಇಂಡಸ್ಟ್ರಿ ಹಬ್‌ ಆಗಿ ಪರಿವರ್ತಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ಉಲ್ಲೇಖೀಸಲಾಗಿದೆ.

ನೂತನವಾಗಿ “ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ’ ರಚಿಸಿ ವಾರ್ಷಿಕವಾಗಿ 250 ಕೋ.ರೂ.ಗಳಂತೆ 5 ವರ್ಷದಲ್ಲಿ 1,250 ಕೋ.ರೂ ವಿನಿಯೋಗಕ್ಕೆ ಆದ್ಯತೆ ಹಾಗೂ ಬಂಟ ಸಮುದಾಯದ ಅಭಿವೃದ್ಧಿಗಾಗಿ “ಬಂಟ್‌ ಅಭಿವೃದ್ಧಿ ನಿಗಮ’ ರಚಿಸಿ ವಾರ್ಷಿಕ 250 ಕೋ.ರೂ.ಗಳಂತೆ 5 ವರ್ಷಕ್ಕೆ 1,250 ಕೋ.ರೂ. ನಿಗದಿ ಮಾಡಲು ಉದ್ದೇಶಿಸಲಾಗಿದೆ.

ಅಡಿಕೆಗೆ ಬಾಧಿಸಿರುವ ಹಳದಿ ಎಲೆರೋಗ ಹಾಗೂ ಇತರ ರೋಗಗಳ ಕುರಿತ ಅಧ್ಯಯನ ಹಾಗೂ ಅಡಿಕೆ ಮಾರುಕಟ್ಟೆ ಬಲಪಡಿಸಲು 50 ಕೋ.ರೂ.ಗಳನ್ನು ವಿನಿಯೋಗಿಸಲಾಗುತ್ತದೆ. ಪ್ರತೀ ಗ್ರಾ. ಪಂ.ನಲ್ಲಿ ನಿಗದಿತ ಅನುದಾನ ಹಾಗೂ “ಶ್ರೀ ಸ್ವಾಮಿ ವಿವೇಕಾನಂದ ಕೋಮು ಹಾಗೂ ಸಾಮಾಜಿಕ ಸೌಹಾರ್ದ ಸಮಿತಿಯನ್ನು ರಚಿಸಲಾಗುವುದು ಎಂದು ಪ್ರಣಾ ಳಿಕೆಯಲ್ಲಿ ಘೋಷಿಸಲಾಗಿದೆ.

ಪ್ರತೀ ಮೀನುಗಾರರಿಗೆ 10 ಲಕ್ಷ ರೂ.ಗಳ ವಿಮಾ ಸೌಲಭ್ಯ, ಮೀನುಗಾರ ಮಹಿಳೆಯರಿಗೆ 1 ಲಕ್ಷ ರೂ. ಬಡ್ಡಿರಹಿತ ಸಾಲ, ಸುಸಜ್ಜಿತ ಮೀನುಗಾರಿಕಾ ಬೋಟ್‌ ಖರೀದಿಗೆ 25 ಲಕ್ಷ ರೂ.ವರೆಗೆ ಸಬ್ಸಿಡಿ (ಶೇ.25ರ ವರೆಗೆ), ಡೀಸೆಲ್‌ ಸಬ್ಸಿಡಿಯನ್ನು ಪ್ರತೀ ಲೀಟರ್‌ಗೆ 10.71 ರೂ.ಗಳಿಂದ 25 ರೂ.ವರೆಗೆ ಹೆಚ್ಚಿಸುವುದು ಮತ್ತು ಪ್ರಸ್ತುತ 300 ಲೀ.ದೊರೆಯುವ ಡೀಸೆಲ್‌ ಪ್ರಮಾಣವನ್ನು 500 ಲೀ.ಗೆ ಏರಿಕೆ ಮಾಡಲಾಗುತ್ತದೆ ಎಂದು ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಪ್ರಕಟಿಸಲಾಗಿದೆ.


Spread the love

Leave a Reply

Please enter your comment!
Please enter your name here