ಕಾಂಗ್ರೆಸ್ ಪಕ್ಷದ ಪರ ಅಲೆ ಈಗಾಗಲೇ ಎದ್ದಿದೆ-ಮಂಜುನಾಥ್ ಭಂಡಾರಿ 

Spread the love

ಕಾಂಗ್ರೆಸ್ ಪಕ್ಷದ ಪರ ಅಲೆ ಈಗಾಗಲೇ ಎದ್ದಿದೆ-ಮಂಜುನಾಥ್ ಭಂಡಾರಿ 

ಉಡುಪಿ: ಜಿಲ್ಲಾ ಕಾಂಗ್ರೆಸ್ ಭವನದಲ್ಲಿ  ನಡೆದ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ  ಮಂಜುನಾಥ್ ಭಂಡಾರಿ ಅವರು ಪಕ್ಷ ಸಂಘಟನೆ ಬಗ್ಗೆ ಸವಿವರವಾದ ಮಾಹಿತಿ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ವಿಧಾನಸಭೆ ಪ್ರತಿಪಕ್ಷ ಉಪನಾಯಕರಾದ  ಯು.ಟಿ ಖಾದರ್ ಅವರು ಕಾರ್ಯಕರ್ತರನ್ನು ಹುರಿದುಂಬಿಸುತ್ತ ಕಾಂಗ್ರೆಸ್ ಎನ್ನುವಂತದು ಸಮಾಜವನ್ನು ಒಗ್ಗುಡಿಸುವ ಪಕ್ಷ, ಬಿಜೆಪಿ ಎನ್ನುವಂತದು ಸಮಾಜವನ್ನು ಒಡೆಯುವ ಪಕ್ಷ ಎಂದರು.

ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ   ಅಶೋಕ್ ಕುಮಾರ್ ಕೊಡವೂರು ಅವರು ಡಿಜಿಟಲ್ ಸದಸ್ಯತ್ವ ನೋಂದಣಿಯ ಬಗ್ಗೆ ಮಾಹಿತಿ ನೀಡಿದರು.

ಪಕ್ಷದ ಮುಖಂಡರಾದ ನರಸಿಂಹಮೂರ್ತಿ, ಬಿ. ಕುಶಲ್ ಶೆಟ್ಟಿ, ಗೀತಾ ವಾಗ್ಲೆ, ದೀಪಕ್ ಕೋಟ್ಯಾನ್, ದಿವಾಕರ್ ಕುಂದರ್, ಯು.ಸುಕುಮಾರ್ ಮುಂತಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಹಲವಾರು ಕಾರ್ಯಕರ್ತರು ತಮ್ಮ ತಮ್ಮ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.

ನೂತನವಾಗಿ ಆಯ್ಕೆಗೊಂಡ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಪಕ್ಷವನ್ನು ಬೂತ್ ಮಟ್ಟದಿಂದ ಬಲಶಾಲಿಯಾಗಿ ಸಂಘಟಿಸುವುದೆಂದು ಸಂಕಲ್ಪ ಮಾಡಲಾಯಿತು.

ಮುಖಂಡರುಗಳಾದ ದಿನೇಶ್ ಪುತ್ರನ್, ಕಿಶನ್ ಹೆಗ್ಡೆ ಕೊಳ್ಕೆಬೈಲು, ಗೋಪಾಲ್ ಶೆಟ್ಟಿ ಕರಂಬಳ್ಳಿ, ಅಮೃತ್ ಶೆಣೈ, ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಪ್ರಶಾಂತ್ ಜತ್ತನ್ನ, ಮಮತಾ ಶೆಟ್ಟಿ, ಪ್ರಶಾಂತ್ ಪೂಜಾರಿ, ಹರೀಶ್ ಕಿಣಿ, ವಿಜಯ್ ಪೂಜಾರಿ ಬೈಲೂರು ಸಭೆಯಲ್ಲಿ ಉಪಸ್ಥಿತರಿದ್ದರು.

ರಮೇಶ್ ಕಾಂಚನ್ ಅವರು ಸ್ವಾಗತಿಸಿ ಪ್ರಸ್ತಾವನೆ ಮಾಡಿದರು. ಸತೀಶ್ ಕುಮಾರ್ ಮಂಚಿ ಹಾಗೂ ಸತೀಶ್ ಕೊಡವೂರು ಅವರು ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ನೆರ್ಗಿ ವಂದಿಸಿದರು.


Spread the love