ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಕೃಷ್ಣಮೂರ್ತಿ ಆಚಾರ್ಯರಿಂದ ನಾಮಪತ್ರ ವಾಪಾಸ್

Spread the love

ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಕೃಷ್ಣಮೂರ್ತಿ ಆಚಾರ್ಯರಿಂದ ನಾಮಪತ್ರ ವಾಪಾಸ್

ಉಡುಪಿ: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಸಿಗದ ಹಿನ್ನಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕೃಷ್ಣಮೂರ್ತಿ ಆಚಾರ್ಯ ತಮ್ಮ ನಾಮಪತ್ರ ವಾಪಾಸ್ ಪಡೆದರು.

ಸೋಮವಾರ ಡಿ ಕೆ ಶಿವಕುಮಾರ್ ಅವರು ಜಿಲ್ಲಾ ಪ್ರವಾಸದಲ್ಲಿದ್ದು ಕೃಷ್ಣಮೂರ್ತಿ ಆಚಾರ್ಯ ಅವರನ್ನು ಮನವೊಲಿಸಿದ ಹಿನ್ನಲೆಯಲ್ಲಿ ನಾಮಪತ್ರ ವಾಪಾಸ್ ಪಡೆದಿದ್ದಾರೆ.

ಕೃಷ್ಣಮೂರ್ತಿಯವರನ್ನು ಮನವೊಲಿಸಿದ ಡಿಕೆ ಶಿವಕುಮಾರ್ ಕೃಷ್ಣಮೂರ್ತಿಯನ್ನು ಸಾರ್ವಜನಿಕ ಸಭೆಯ ವೇದಿಕೆಗೆ ಬರಮಾಡಿಕೊಂಡರು. ಅಧಿಕೃತ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ರನ್ನು ಆಲಂಗಿಸಿದ ಕೃಷ್ಣಮೂರ್ತಿ ಆಚಾರ್ಯ ಆಚಾರ್ಯ ತಮ್ಮ ಬೆಂಬಲವನ್ನು ಘೋಷಿಸಿದರು.


Spread the love