ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ ಪರಸ್ಫರ ಘೋಷಣೆ – ಮಿಥುನ್ ರೈ ಕಾರಿಗೆ ಕಲ್ಲು ತೂರಾಟ

Spread the love

ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ ಪರಸ್ಫರ ಘೋಷಣೆ – ಮಿಥುನ್ ರೈ ಕಾರಿಗೆ ಕಲ್ಲು ತೂರಾಟ

ಮಂಗಳೂರು: ನಗರದ ಹೊರವಲಯದ ಮೂಡುಶೆಡ್ಡೆ ಎಂಬಲ್ಲಿ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಕಾರಿನ ಮೇಲೆ ಕಲ್ಲು ತೂರಾಟ ನಡೆದ ಘಟನೆ ಬುಧವಾರ ರಾತ್ರಿ ನಡೆದಿದೆ.

ಮಾಹಿತಿಗಳ ಪ್ರಕಾರ ಬುಧವಾರ ಸಂಜೆ ಮೂಡುಶೆಡ್ಡೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದ್ದು ಈ ವೇಳೆ ಮಿಥುನ್ ರೈ ಮತ್ತು ಅವರ ಬೆಂಬಲಿಗರಿಂದ್ದ ಕಾರು ಆ ದಾರಿಯಲ್ಲಿ ಬಂದಿದ್ದು ಬಿಜೆಪಿಯವರು ಮೋದಿ ಮೋದಿ ಘೋಷಣೆ ಕೂಗಿದ್ದು ಈ ವೇಳೆ ಮಿಥುನ್ ರೈ ಮತ್ತು ಬೆಂಬಲಿಗರು ಕಾರು ನಿಲ್ಲಿಸಿ ಕಾಂಗ್ರೆಸ್ ಜೈ ಎಂದು ಘೋಷಣೆ ಕೂಗಿದ್ದಾರೆ.

ಈ ಸಂದರ್ಭದಲ್ಲಿ ಎರಡು ತಂಡಗಳ ಜೈಕಾರದ ವೇಳೆ ಮಿಥುನ್ ರೈ ಕಾರಿಗೆ ಕಲ್ಲು ತೂರಾಟ ನಡೆದಿದ್ದು ಇಬ್ಬರು ಕಾರ್ಯಕರ್ತರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು ಎರಡು ಗುಂಪುಗಳನ್ನು ಚದುರಿಸಿದ್ದಾರೆ.

ಸ್ಥಳದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.


Spread the love

Leave a Reply

Please enter your comment!
Please enter your name here