ಕಾಂಗ್ರೆಸ್ ಮುಖಂಡ ದಿ. ದೇವದಾಸ್ ರವರಿಗೆ ನುಡಿ ನಮನ 

Spread the love

ಕಾಂಗ್ರೆಸ್ ಮುಖಂಡ ದಿ. ದೇವದಾಸ್ ರವರಿಗೆ ನುಡಿ ನಮನ 

ಮಂಗಳೂರು:  ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಇತ್ತೀಚಿಗೆ ನಿಧನರಾದ ಕಾಂಗ್ರೆಸ್ ಮುಖಂಡರು, ಕಂಬ್ಲ ವಾರ್ಡ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ದಿ. ದೇವದಾಸ್ ದೇವಾಡಿಗ ರವರಿಗೆ ನುಡಿ ನಮನ ಕಾರ್ಯಕ್ರಮ   ಕಾಂಗ್ರೆಸ್ ಭವನದಲ್ಲಿ ನಡೆಯಿತು.

ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರು ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡುತ್ತಾ, ದಿ.ದೇವದಾಸ್ ರವರು ಪಕ್ಷದ ನಿಷ್ಠಾವಂತ, ಸೇವಾಮನೋಭಾವನೆಯುಳ್ಳ ನಾಯಕರು. ಪ್ರತಿಯೊಂದು ಚುನಾವಣೆಯಲ್ಲಿ ಅತ್ಯಂತ ಸಕ್ರಿಯವಾಗಿ ತೊಡಗಿಸಿಕೊಳ್ಳುವವರು. ರಾಜಕೀಯ ಕ್ಷೇತ್ರದಲ್ಲಿದ್ದುಕೊಂಡು ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಗಳಿಸಿಕೊಂಡಿದ್ದರು. ಅವರ ಅಗಲುವಿಕೆಯನ್ನು ಗುರುತಿಸುವುದರ ಜತೆಗೆ ಅವರ ಜೀವನ ಸಾರ್ಥಕತೆಯನ್ನು ನೋಡಬೇಕು. ಒಂದು ಗುರುತರವಾದ ಜವಾಬ್ದಾರಿಯನ್ನು ನೀಡಿದರೆ, ಬಹಳ ಚಾಕಚಕ್ಯತೆಯಿಂದ ಅದನ್ನು ಪೂರ್ಣ ಗೊಳಿಸುತ್ತಿದ್ದ ವ್ಯಕ್ತಿ ಅವರು. ನೇರ ನಡೆನುಡಿಯ ವ್ಯಕ್ತಿಯಾಗಿದ್ದ ಅವರು, ಪಕ್ಷದ ಶಕ್ತಿಯಾಗಿದ್ದರು. ಅವರು ಮಾಡಿದ ಸಮಾಜ ಸೇವೆ ನಮಗೆಲ್ಲರಿಗೂ ಮಾದರಿ. ಕಾಂಗ್ರೆಸ್ ಪಕ್ಷ ಅವರಿಗೆ ಋಣಿಯಾಗಿದೆ ಎಂದರು.

ಸಭೆಯಲ್ಲಿ ಮಾಜಿ ಮ. ನ. ಪಾ. ಸದಸ್ಯ ಪದ್ಮನಾಭ ಪಣಿಕ್ಕರ್, ಕಾರ್ಮಿಕ ಮುಖಂಡ ವಿಷ್ಣು ಮೂರ್ತಿ, ಮುಂಬೈ ಕಾಂಗ್ರೆಸ್ ಮುಖಂಡ ಶಂಕರ್ ಸುವರ್ಣ ರವರು ಮಾತನಾಡಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ವಿಧಾನಪರಿಷತ್ ಸದಸ್ಯ ಕೆ. ಹರೀಶ್ ಕುಮಾರ್, ಮಾಜಿ ಮೇಯರ್ ಮಹಾಬಲ ಮಾರ್ಲ, ವಿಶ್ವಾಸ್ ಕುಮಾರ್ ದಾಸ್, ಟಿ. ಕೆ. ಸುಧೀರ್, ನೀರಜ್ ಪಾಲ್, ರಘುರಾಜ್ ಕದ್ರಿ, ಪದ್ಮನಾಭ ಅಮೀನ್, ಮೋಹನ್ ಶೆಟ್ಟಿ, ಶಾಂತಲ ಗಟ್ಟಿ, ಮಂಜುಳಾ ನಾಯಕ್, ಲಿಯಾಖತ್ ಶಾ, ನಿರಂಜನ್, ಮಿಥುನ್ ಉರ್ವಾ, ಯೋಗೀಶ್ ನಾಯಕ್, ಮೊದಲಾದವರು ಹಾಜರಿದ್ದರು. ಚೇತನ್ ಪೂಜಾರಿ ಸ್ವಾಗತಿಸಿ, ತನ್ವಿರ್ ಶಾ ವಂದಿಸಿದರು.


Spread the love