ಕಾಂಗ್ರೆಸ್ ವತಿಯಿಂದ ದೇರೆಬೈಲ್ ನೈರುತ್ಯ, ಕಂಕನಾಡಿ ‘ಬಿ’ ಮತ್ತು ಬೋಳೂರು ವಾರ್ಡಿನಲ್ಲಿ ದಿನಸಿ ಕಿಟ್ ವಿತರಣೆ

Spread the love

ಕಾಂಗ್ರೆಸ್ ವತಿಯಿಂದ ದೇರೆಬೈಲ್ ನೈರುತ್ಯ, ಕಂಕನಾಡಿ ‘ಬಿ’ ಮತ್ತು ಬೋಳೂರು ವಾರ್ಡಿನಲ್ಲಿ ದಿನಸಿ ಕಿಟ್ ವಿತರಣೆ

ದೇರೆಬೈಲ್ ನೈರುತ್ಯ ವಾರ್ಡಿನಲ್ಲಿ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ವಿತರಣೆ

ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ತಾ 13.6.2021ರಂದು 26ನೇ ದೇರೆಬೈಲ್ ನೈರುತ್ಯ ವಾರ್ಡಿನ ಕೋವಿಡ್ ಸಂತ್ರಸ್ತರಿಗೆ ದಿನ ಸಾಮಾನುಗಳ ಕಿಟ್ ಗಳನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷ ಟಿ. ಸಿ. ಗಣೇಶ್, ಮಾಜಿ ಮ ನ ಪಾ ಸದಸ್ಯ ಪದ್ಮನಾಭ ಅಮೀನ್, ಒಬಿಸಿ ಜಿಲ್ಲಾಧ್ಯಕ್ಷ ವಿಶ್ವಾಸ್ ದಾಸ್, ಮಾಜಿ ಮುಡಾ ಅಧ್ಯಕ್ಷ ಡಾ. ಬಿ. ಜಿ. ಸುವರ್ಣ, ಪಕ್ಷದ ಪ್ರಮುಖರಾದ ನೀರಜ್ ಪಾಲ್, ಟಿ. ಕೆ. ಸುಧೀರ್, ಉದ್ಯಮಿ ಹರೀಶ್ ಚಂದ್ರ,ರಕ್ಷಿತ್ ಸಾಲ್ಯಾನ್, ಚೇತನ್ ಪೂಜಾರಿ,ಉದಯ್ ಕುಂದರ್,ರವಲ್ ನಾಥ್ ಕಾಮತ್, ಪ್ರಥ್ವಿ,ಮನೋಜ್, ಮೋನಪ್ಪ, ಸೀತಾರಾಮ್ ಶೆಟ್ಟಿ, ಸಿರಿಲ್ ಪಿಂಟೋ, ಯಶವಂತ ಪ್ರಭು, ಆಸೀಫ್ ಜೆಪ್ಪು,ಜೀವನ ಮೋರೆ, ಮ್ಯಾಕ್ಸಿ ಮೊದಲಾದವರು ಉಪಸ್ಥಿತರಿದ್ದರು.

ಕಂಕನಾಡಿ ‘ಬಿ’ ವಾರ್ಡಿನಲ್ಲಿ ಮಾಜಿ ಶಾಸಕ ಲೋಬೊ ರಿಂದ ದಿನಸಿ ಕಿಟ್ ವಿತರಣೆ

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕಂಕನಾಡಿ ‘ಬಿ ‘ ವಾರ್ಡಿನಲ್ಲಿ ಇಂದು ತಾ 13.6.2021ರಂದು ಮಂಗಳೂರು ದಕ್ಷಿಣ ಕ್ಷೇತ್ರದ ಮಾಜಿ ಶಾಸಕ ಜೆ. ಆರ್. ಲೋಬೊ ರವರು ಕೋವಿಡ್ ಲಾಕ್ ಡೌನ್ ನಿಂದಾಗಿ ತೊಂದರೆಗೆ ಒಳಗಾದವರಿಗೆ ದಿನ ಸಾಮಾನುಗಳ ಕಿಟ್ ಗಳನ್ನು ವಿತರಿಸಿದರು. ಸುಮಾರು 200ಕ್ಕೂ ಮಿಕ್ಕಿ ವಾರ್ಡಿನ ಜನರಿಗೆ ಕಿಟ್ ಗಳನ್ನು ಹಸ್ತಾಂತರಿಸಿ ಮಾತನಾಡಿದ ಅವರು, ಬಹುತೇಕ ಬಡವರು, ಕಾರ್ಮಿಕ ವರ್ಗದವರು ಇರುವಂತಹ ಈ ಪ್ರದೇಶದಲ್ಲಿ ಕೋವಿಡ್ ಲಾಕ್ ಡೌನ್ ನಿಂದಾಗಿ ಜನರು ಜೀವನ ಸಾಗಿಸಲು ಹರಸಾಹಸ ಪಡುತ್ತಿದ್ದಾರೆ. ಜನರು ಕೆಲಸವಿಲ್ಲದೇ ದಿಗ್ರಮೆ ಗೊಂಡಿದ್ದಾರೆ. ಸರಕಾರದಿಂದ ಜನರಿಗೆ ಈವರೆಗೆ ಯಾವುದೇ ದಿನಸಿ ಕಿಟ್ ಗಳು ಮನೆ ಬಾಗಿಲಿಗೆ ಬಂದಿರುವುದಿಲ್ಲ. ಜನರ ಪರಿಸ್ಥಿತಿಯನ್ನು ಅರಿತು ಕಾಂಗ್ರೆಸ್ ಪಕ್ಷ ಬಡಜನರ ಮನೆ ಬಾಗಿಲಿಗೆ ಬಂದು ಸಹಾಯ ಮಾಡುತ್ತಿದೆ ಎಂದರು.

ಸ್ಥಳೀಯ ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ, ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ,ಮಹಾಲಿಂಗೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ದೇವೇಂದ್ರ, ವಾರ್ಡ್ ಅಧ್ಯಕ್ಷ ಭರತ್ ರಾಮ್,ಯುವ ಕಾಂಗ್ರೆಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಮೆರಿಲ್ ರೇಗೊ, ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿಗಳಾದ ಟಿ. ಕೆ. ಸುಧೀರ್, ನೀರಜ್ ಪಾಲ್, ಬ್ಲಾಕ್ ಉಸ್ತುವಾರಿ ಹೊನ್ನಯ್ಯ,ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುನಿಲ್ ಪೂಜಾರಿ,ದುರ್ಗಾಪ್ರಸಾದ್, ಗೋಪಾಲ್ ಶೆಟ್ಟಿ,ಕ್ರತಿನ್ ಕುಮಾರ್, ಉದಯ್ ಕುಂದರ್, ವಿಜಯಾ ಲೋಬೊ, ವಿಲ್ಫ್ರೆಡ್, ಶಶಿಧರ್ ಕೊಟ್ಟಾರಿ, ಆಸೀಫ್ ಜೆಪ್ಪು, ಯಶವಂತ ಪ್ರಭು, ಜೀವನ್ ಮೋರೆ, ರೋಷನ್, ಪ್ರವೀತ್ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.

ಬೋಳೂರು ವಾರ್ಡಿನಲ್ಲಿ ಕಾಂಗ್ರೆಸ್ ವತಿಯಿಂದ ದಿನಸಿ ಕಿಟ್ ಗಳ ವಿತರಣೆ

ನಗರದ 27ನೇ ಬೋಳೂರು ವಾರ್ಡಿನ ಕುದ್ರೋಳಿ ಕರ್ನಲ್ ಗಾರ್ಡನ್ಸ್ ನಲ್ಲಿ ಇಂದು ತಾ 13.6.2021ರಂದು ಕೋವಿಡ್ ಸಂದಿಗ್ದ ಪರಿಸ್ಥಿತಿಯಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಬಡ ಜನರಿಗೆ ದಿನಸಿ ಸಾಮಾನುಗಳ ಕಿಟ್ ಗಳನ್ನು ಮಾಜಿ ಶಾಸಕ ಜೆ. ಆರ್. ಲೋಬೊ ರವರು ವಿತರಣೆಗೈದರು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಮಾಜಿ ಮ ನ ಪಾ ಸದಸ್ಯ ಕಮಲಾಕ್ಷ ಸಾಲ್ಯಾನ್, ಒಬಿಸಿ ಜೆಲ್ಲಾಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ವಾರ್ಡ್ ಅಧ್ಯಕ್ಷ ದೀಪಕ್ ಶ್ರೀಯಾನ್, ಡಾ. ಬಿ. ಜಿ. ಸುವರ್ಣ, ಟಿ. ಕೆ. ಸುಧೀರ್, ನೀರಜ್ ಪಾಲ್,ಉದಯ್ ಕುಂದರ್,ಭುವನ್ ಕರ್ಕೇರ,ವಿಶಾಲ್, ಚೇತನ್, ರಕ್ಷಿತ್, ರೋಷನ್, ರಾಜ್ ಕುಮಾರ್,ಆಸೀಫ್ ಜೆಪ್ಪು, ಯಶವಂತ ಪ್ರಭು, ಜೀವನ್ ಮೋರೆ, ಶಶಿರಾಜ್ ಮೊದಲಾದವರು ಉಪಸ್ಥಿತರಿದ್ದರು.


Spread the love

1 Comment

  1. Dear Mr. Lobo and your team, its good to hear that you are reaching out to the needful during this difficult times…. But it’s disheartening to see pictures of the people you are helping…. As those people are here only due the present situation….. Ofcourse you would not distribute food kits in normal times… As Jesus said let not left hand know what the right does

Comments are closed.