ಕಾಂಗ್ರೆಸ್ ವತಿಯಿಂದ ಮಂಗಳಾದೇವಿ ವಾರ್ಡ್ ನ ಆರ್ಥಿಕವಾಗಿ ಹಿಂದುಳಿದವರಿಗೆ  ರೇಷನ್ ಕಿಟ್ ಗಳ ವಿತರಣೆ 

Spread the love

ಕಾಂಗ್ರೆಸ್ ವತಿಯಿಂದ ಮಂಗಳಾದೇವಿ ವಾರ್ಡ್ ನ ಆರ್ಥಿಕವಾಗಿ ಹಿಂದುಳಿದವರಿಗೆ  ರೇಷನ್ ಕಿಟ್ ಗಳ ವಿತರಣೆ 

ಮಂಗಳೂರು: ಮಂಗಳಾದೇವಿ ವಾರ್ಡಿನಲ್ಲಿರುವ ಆರ್ಥಿಕವಾಗಿ ಹಿಂದುಳಿದವರಿಗೆ ಎಮ್ಮೆಕೆರೆ ಬಳಿಯಿರುವ ದಿ. ಎಸ್. ಕೆ. ಅಮೀನ್, ಮಾಜಿ ಎಂ.ಎಲ್. ಸಿ ಇವರ ಮನೆಯಲ್ಲಿ   ಕಾಂಗ್ರೆಸ್ ಪಕ್ಷದ ವತಿಯಿಂದ ರೇಷನ್ ಕಿಟ್ ಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಜೆ. ಆರ್. ಲೋಬೊ ರವರು ಮಾತನಾಡುತ್ತಾ, ಕೋವಿಡ್ ನ ಈ ಒಂದು ಸಂದಿಗ್ದ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯ ಮಾಡುವ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷ ಮಾಡುತ್ತದೆ. ಪ್ರತಿಯೊಂದು ಕಷ್ಟಕಾಲದಲ್ಲಿ ಕಾಂಗ್ರೆಸ್ ಬಡಜನರ ಪರವಾಗಿ ನಿಂತಿದೆ. ಪ್ರಸ್ತುತ ಕಾಲದಲ್ಲಿ ಎಲ್ಲರಿಗೂ ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಯವರ ಹೆಸರು ನೆನಪಿಗೆ ಬರುತ್ತದೆ. ಅವರು ಅಧಿಕಾರದಲ್ಲಿದ್ದಾಗ ಬಡವರಿಗೆ ಅನೇಕ ಯೋಜನೆಗಳನ್ನು ರೂಪಿಸಿದ್ದರು. ಉಳುವವನಿಗೆ ಭೂಮಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದು ಬಡವರಿಗೆ ಸಹಾಯ ಮಾಡುವುದರ ಮೂಲಕ ಸಮಾಜದಲ್ಲಿ ತಲೆ ಎತ್ತಿ ಜೀವನ ಸಾಗಿಸಲು ನೆರವಾಗಿದ್ದರು. ಅದೇ ಪರಂಪರೆಯನ್ನು ಇಂದು ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಮುಂದುವರಿಸಿಕೊಂಡು ಎಲ್ಲಾ ಕಡೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿರುತ್ತಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಿಂ ವಹಿಸಿದ್ದರು. ಮಹಿಳಾ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷೆ ನಮಿತಾ ರಾವ್, ವಾರ್ಡ್ ಅಧ್ಯಕ್ಷ ನರೇಶ್, ಪಕ್ಷದ ಮುಖಂಡರಾದ ಟಿ. ಕೆ. ಸುಧೀರ್, ನೀರಜ್ ಪಾಲ್, ದುರ್ಗಾಪ್ರಸಾದ್, ರಮಾನಂದ ಪೂಜಾರಿ, ಎಸ್. ಕೆ. ಸವಾನ್, ಪ್ರೇಮ್, ಪ್ರವೀತಾ ಕರ್ಕೇರ, ಉದಯ್ ಕುಂದರ್, ಆಸೀಫ್, ಕೃತಿನ್ ಕುಮಾರ್, ಯಶವಂತ ಪ್ರಭು, ಜೀವನ್ ಮೋರೆ, ರೋಷನ್, ಶಾನ್ ಡಿಸೋಜಾ, ಅಶೋಕ್, ಆಸ್ಟನ್ ಸಿಕ್ವೇರಾ, ಲಕ್ಷ್ಮಣ್ ಶೆಟ್ಟಿ, ನೆಲ್ಸನ್ ಮೊಂತೆರೊ ಮೊದಲಾದವರು ಉಪಸ್ಥಿತರಿದ್ದರು.


Spread the love