ಕಾಂಗ್ರೆಸ್ ವಿಜಯಕ್ಕೆ ಜನಾರ್ದನ ಪೂಜಾರಿ ಹರ್ಷ

Spread the love

ಕಾಂಗ್ರೆಸ್ ವಿಜಯಕ್ಕೆ ಜನಾರ್ದನ ಪೂಜಾರಿ ಹರ್ಷ

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅತ್ಯದ್ಭುತ ಸಾಧನೆಗೈದು ಸಂಪೂರ್ಣ ಬಹುಮತ ಪಡೆದ ಕಾಂಗ್ರೆಸ್ ಪಕ್ಷದ ಸಾಧನೆಗೆ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಯವರು ಅತೀವ ಹರ್ಷ ವ್ಯಕ್ತಪಡಿಸಿರುತ್ತಾರೆ.

ಕರ್ನಾಟಕದ ಜನರು ಬದಲಾವಣೆಯನ್ನು ಬಯಸಿದ್ದರು.ರಾಹುಲ್ ಗಾಂಧಿ ಯವರ ಭಾರತ ಜೋಡೋ ಯಾತ್ರೆ, ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯ ಗ್ಯಾರಂಟಿ ಕಾರ್ಡ್ ನ್ನು ಜನ ಬಹಳಷ್ಟು ಮೆಚ್ಚಿಕೊಂಡಿದ್ದರು.ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ,ರಾಜ್ಯ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲಾ,ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿ. ಕೆ. ಹರಿಪ್ರಸಾದ್, ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಮತ್ತು ಇತರ ನಾಯಕರ ನಿರಂತರ ಕಾರ್ಯದಿಂದ ಕಾಂಗ್ರೆಸ್ ಇಂದು ಅಧಿಕಾರಕ್ಕೆ ಮರಳುವಂತಾಗಿದೆ. ಪಕ್ಷದ ಸಾಧನೆಗೆ ಅವಿರತವಾಗಿ ಹಗಲಿರುಳು ದುಡಿದ ಎಲ್ಲಾ ಕಾರ್ಯಕರ್ತರಿಗೂ ಅಭಿನಂದನೆಗಳನ್ನು ಪೂಜಾರಿಯವರು ಸಲ್ಲಿಸಿದ್ದಾರೆ.


Spread the love

Leave a Reply

Please enter your comment!
Please enter your name here