
ಕಾಂಗ್ರೆಸ್ ಸರ್ಕಾರ ಬಂದರೆ ಪಿ ಎಫ್ ಐ ಕಾರ್ಯಕರ್ತರು ಜೈಲಿನಿಂದ ಹೊರಕ್ಕೆ – ಅಮಿತ್ ಶಾ
ಉಡುಪಿ: ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಕಾಂಗ್ರೆಸ್ ನೇತೃತ್ವದ ರಿವರ್ಸ್ ಗೇರ್ ಸರಕಾರ ಅಧಿಕಾರ ಬರದಂತೆ ಬದಲಾಗಿ ಬಿಜೆಪಿ ನೇತೃತ್ವದ ಡಬಲ್ ಇಂಜಿನ್ ಸರಕಾರವನ್ನು ಅಧಿಕಾರಕ್ಕೆ ತರುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ಅವರು ಕಟಪಾಡಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿ ಒಂದು ವೇಳೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ರಿವರ್ಸ್ ಗೇರ್ ಸರಕಾರ ಅಧಿಕಾರ ಬಂದಲ್ಲಿ ಪಿ ಎಫ್ ಐ ಸಂಘಟನೆಯನ್ನು ಮತ್ತೆ ಬಲಿಷ್ಠವಾಗಲು ಅವಕಾಶ ಮಾಡಿಕೊಡುತ್ತದೆ.
ಉಡುಪಿ ಶ್ರೀ ಕೃಷ್ಣ ಮಂದಿರ, ಶ್ರೀ ಮೂಕಾಂಬಿಕಾ ದೇವಿಗೆ, ಅಷ್ಟ ಮಠಗಳಿಗೂ ನನ್ನ ಪ್ರಣಾಮಗಳು. ಶ್ರೀ ನಾರಾಯಣ ಗುರುಗಳಿಗೆ ವಿಶೇಷ ಪ್ರಣಾಮಗಳು. ಶ್ರೀ ನಾರಾಯಣ ಗುರು ಕೋಟಿಗಟ್ಟಲೆ ಯುವಕರಿಗೆ ಪ್ರೇರಣೆ ಎಂದು ಹೇಳಿದರು.
ಹಿಂದುಳಿದ ವರ್ಗಕ್ಕೆ ಶಕ್ತಿ ತುಂಬುವ ಕೆಲಸವನ್ನು ನಾರಾಯಣ ಗುರುಗಳು ಮಾಡಿದ್ದರು. ಪಿ.ಎಫ್.ಐ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಿತು. ನಾನು ಪ್ರವೀಣ್ ನೆಟ್ಟಾರು ಜೀವವನ್ನ ನಾನು ವಾಪಸ್ ತರಲು ಸಾಧ್ಯವಿಲ್ಲ. ಆದರೆ ಹತ್ಯೆ ಮಾಡಿದ ಪಿಎಫ್ಐಯನ್ನು ನರೇಂದ್ರ ಮೋದಿ ಬ್ಯಾನ್ ಮಾಡಿದೆ. ಪಿ.ಎಫ್.ಯ ನ ಸಾಕಷ್ಟು ಕಾರ್ಯಕರ್ತರನ್ನು ಕಂಬಿ ಹಿಂದೆ ತಳ್ಳಿದೆ. ಕಾಂಗ್ರೆಸ್ ಯಾವಾಗಲು ವೋಟ್ ಬ್ಯಾಂಕ್ ರಾಜಕಾರಣವನ್ನು ಮಾಡಿದೆ ಎಂದು ಅಮಿತ್ ಶಾ ಕಿಡಿಕಾರಿದರು.