ಕಾಂಗ್ರೆಸ್ ಸಿದ್ದಾಂತ ಒಪ್ಪಿ ಬರುವವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ: ಡಿಕೆ ಶಿವಕುಮಾರ್

Spread the love

ಕಾಂಗ್ರೆಸ್ ಸಿದ್ದಾಂತ ಒಪ್ಪಿ ಬರುವವರನ್ನು ಪ್ರೀತಿಯಿಂದ ಸ್ವಾಗತಿಸುತ್ತೇವೆ: ಡಿಕೆ ಶಿವಕುಮಾರ್

 
ಕುಂದಾಪುರ: ಪಕ್ಷದ ಸಿದ್ದಾಂತ ಹಾಗೂ ತತ್ವವನ್ನು ಒಪ್ಪಿ ಕಾಂಗ್ರೆಸ್ ಪಕ್ಷಕ್ಕೆ ಬರುವವರನ್ನು ಪ್ರೀತಿ ಹಾಗೂ ವಿಶ್ವಾಸದಿಂದ ಬರಮಾಡಿಕೊಳ್ಳುತ್ತೇವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.

ಇಲ್ಲಿಗೆ ಸಮೀಪದ ಬೀಜಾಡಿಯ ಕಡಲ ಕಿನಾರೆಯ ಸನ್ ಕ್ಯಾಸ್ಟಲ್ ಹೋಂ ಸ್ಟೇ ಯಲ್ಲಿ ಬುಧವಾರ ಬೈಂದೂರು ಕ್ಷೇತ್ರದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿಯವರ ನೇತ್ರತ್ವದಲ್ಲಿ ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ಒಪ್ಪಿ ಬೇರೆ ಬೇರೆ ರಾಜಕೀಯ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಅವರು ಪಕ್ಷದ ಶಾಲು ನೀಡಿ ಬರಮಾಡಿಕೊಂಡರು.

ಜೆಡಿಎಸ್ ಪಕ್ಷದ ಪ್ರಮುಖರಾದ ವಕೀಲ ರಂಜಿತಕುಮಾರ ಶೆಟ್ಟಿ ಉಪ್ಪುಂದ, ಮಾರುತಿ ಮೊಗವೀರ ಕೊಲ್ಲೂರು, ಜಮಾಲ ಕುದ್ರುಮಕ್ಕಿ ಗುಲ್ವಾಡಿ, ರಾಜೇಶ್ ಭಂಡಾರಿ ಹಟ್ಟಿಯಂಗಡಿ ಹಾಗೂ ಅಶೋಕ ಮೊಗವೀರ ಹಟ್ಟಿಯಂಗಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ಕೆಪಿಸಿಸಿ ಪದಾಧಿಕಾರಿ ರಘುನಂದನ್, ಉದ್ಯಮಿ ಯು.ಬಿ.ಶೆಟ್ಟಿ, ಕಾಂಗ್ರೆಸ್ ಪಕ್ಷದ ಪ್ರಮುಖರಾದ ವೆರೋನಿಕಾ ಕರ್ನೋಲಿಯಾ, ಡಾ.ಸುನಿತಾ, ನವೀನ್‍ಚಂದ್ರ ಶೆಟ್ಟಿ ಕಾಪು, ಮದನಕುಮಾರ ಉಪ್ಪುಂದ, ಯುವ ಕಾಂಗ್ರೆಸ್ ಮುಖಂಡ ಶೇಖರ ಪೂಜಾರಿ ಉಪ್ಪುಂದ ಇದ್ದರು.


Spread the love