‘ಕಾಂತಾರ’ ನಮ್ಮ ಸಂಸ್ಕøತಿಯನ್ನು ಜಗತ್ತಿಗೆ ಸಾರಿದೆ: ಡಾ ಯದುಪತಿ ಗೌಡ

Spread the love

‘ಕಾಂತಾರ’ ನಮ್ಮ ಸಂಸ್ಕøತಿಯನ್ನು ಜಗತ್ತಿಗೆ ಸಾರಿದೆ: ಡಾ ಯದುಪತಿ ಗೌಡ

ಮೂಡುಬಿದಿರೆ: ತುಳು ಭಾಷೆ, ಸಂಸ್ಕøತಿ ಚಂದ. ಈ ಭಾಷೆಗೆ ಮನಸ್ಸನ್ನು ಕಟ್ಟುವ ಶಕ್ತಿ ಇದೆ. ಯಾವ ಭಾಷೆಯು ಕೀಳಲ್ಲ. ಎಲ್ಲಾ ಭಾಷೆಗಳಿಗೂ ಅವುಗಳದ್ದೇ ಆದ ಗೌರವ, ಸ್ಥಾನಮಾನವಿದೆ ಎಂದು ಬೆಳ್ತಂಗಡಿ ವಾಣಿ ಕಾಲೇಜಿನ ಪ್ರಾಂಶುಪಾಲ ಡಾ ಯದುಪತಿ ಗೌಡ ಹೇಳಿದರು.

ಮಿಜಾರಿನ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ತುಳು ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಹಿಂದಿನ ಕಾಲದಲ್ಲಿ ಕೂಡಿ ಬಾಳುವ ಸಂಸ್ಕೃತಿ ಇತ್ತು. ಆದರೆ ಈಗ ವಿದೇಶಿ ಚಿಂತನೆಗಳಿಂದ ನಮ್ಮ ಜನತೆ ತಮ್ಮ ಸಂಸ್ಕೃತಿಯನ್ನು ಅಸಡ್ಡೆ ಮಾಡುತ್ತಿದ್ದಾರೆ. ನಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಹಲವು ಸಂಪ್ರದಾಯಗಳು ವೈಜ್ಞಾನಿಕ ನೆಲೆಯಿಂದ ಕೂಡಿದ್ದವು. ನಮ್ಮ ಸಂಸ್ಕೃತಿ, ಪರಂಪರೆಯನ್ನು ನಾವೇ ಉಳಿಸಬೇಕು. ಈ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಕøತಿಯ ಅನಾವರಣ ಮಾಡುವ ಕೆಲಸವಾಗಬೇಕು ಎಂದರು.

ಇತ್ತೀಚೆಗೆ ಬಿಡುಗಡೆಯಾಗಿ, ಯಶಸ್ವಿ ಪ್ರದರ್ಶನ ಕಾಣುತ್ತಿರುವ ತುಳುನಾಡಿನ ಸಂಸ್ಕøತಿ, ದೈವಾರದನೆಯನ್ನು ಬಿಂಬಿಸುವ ಕಾಂತರ ಸಿನಿಮಾವೂ ನಮ್ಮ ಸಂಸ್ಕೃತಿಯನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟಿದೆ. ಇಂದು ಎಲ್ಲರೂ ನಮ್ಮ ಸಂಸ್ಕøತಿಯ ಶ್ರೇಷ್ಠತೆಯನ್ನು ಕೊಂಡಾಡುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ ಪೀಟರ್ ಫೆನಾರ್ಂಡಿಸ್, ತುಳು ಸಂಘದ ಸಂಯೋಜಕರಾದ ಡಾ ಪ್ರಮೀಳಾ ಕೊಳಕೆ ಹಾಗೂ ಮೆಕ್ಯಾನಿಕಲ್ ವಿಭಾಗದ ಪ್ರಾಧ್ಯಾಪಕ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ತುಳು ಸಂಸ್ಕøತಿಯನ್ನು ಬಿಂಬಿಸುವ ಹಲವು ನೃತ್ಯಗಳು ಹಾಗೂ ಪಿಲಿ ನಲಿಕೆ ಎಲ್ಲರ ಗಮನ ಸೆಳೆಯಿತು. ಕಾರ್ಯಕ್ರಮವನ್ನು ಹಿಂಗಾರವನ್ನು ಅರಳಿಸುವ ಮೂಲಕ ಉದ್ಘಾಟಿಸಲಾಯಿತು. ಕಾರ್ಯಕ್ರಮವನ್ನು ಕ್ಷಿರಾ ಸ್ವಾಗತಿಸಿ, ಶ್ರುತಿ ವಂದಿಸಿ, ಗಾನವಿ ನಿರೂಪಿಸಿದರು.


Spread the love

Leave a Reply

Please enter your comment!
Please enter your name here