ಕಾಟಿಪಳ್ಳದಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಗೆ ಅಭಿನಂದನೆ

Spread the love

ಕಾಟಿಪಳ್ಳದಲ್ಲಿ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಗೆ ಅಭಿನಂದನೆ

ರಿಲಯನ್ಸ್ ಯೂತ್ ಅಸೋಸಿಯೇಷನ್ ಕಾಟಿಪಳ್ಳ ಹಾಗೂ ರಿಲಯನ್ಸ್ ಓವರ್ಸೀಸ್ ಇದರ ಜಂಟಿ ಆಶ್ರಯದಲ್ಲಿ ಸುರತ್ಕಲ್ ಅಕ್ರಮ ಟೋಲ್ ಗೇಟನ್ನು ತೆರವು ಗೊಳಿಸಲು ಮುಖ್ಯ ಕಾರಣಕರ್ತರಾದ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರನ್ನು ಅಭಿನಂದಿಸಲಾಯಿತು.

ಅಭಿನಂದನಾ ಭಾಷಣ ಮಾಡಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ ಯವರು ಸುರತ್ಕಲ್ ಟೋಲ್ ಗೇಟ್ ತೆರವುಗೊಳ್ಳಲು ಹೋರಾಟ ಸಮಿತಿಯ ಛಲ ಬಿಡದ ಪರಿಶ್ರಮವೇ ಮುಖ್ಯ ಕಾರಣ ಇಲ್ಲವಾದಲ್ಲಿ ಅಕ್ರಮವಾಗಿ ತಿಂಗಳಿಗೆ ಲಕ್ಷಗಟ್ಟಲೆ ಲೂಟಿ ಹೊಡೆಯುತ್ತಿದ್ದ ಸುಲಿಗೆ
ಕೇಂದ್ರವನ್ನು ತೆರವು ಗೊಳಿಸಲು ಬಿಜೆಪಿ ಗೆ 7 ವರ್ಷ ಬೇಕಾಗಿರಲಿಲ್ಲ. ಏನೇ ಆಗಲಿ ಇದೀಗ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಗೆ ಗೆಲುವು ಸಿಕ್ಕಿದೆ ನಾನು ನಾಡಿನ ಸಮಸ್ತ ಜನತೆಯ ಪರವಾಗಿ ಹ್ರದಯ ಪೂರ್ವಕವಾಗಿ ಇವರನ್ನು ಅಭಿನಂದಿಸುತ್ತೇನೆ. ಎಂದು ಹೇಳಿದರು.

ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಸಹ ಸಂಚಾಲಕ ವೈ ರಾಘವೇಂದ್ರ ರಾವ್, ಕಾನೂನು ಸಲಹೆಗಾರ ದಿನೇಶ್ ಹೆಗ್ಡೆ ಉಳೆಪಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ರಿಲಯನ್ಸ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ಮುಹಮ್ಮದ್ ವಾಸಿಂ ಅಧ್ಯಕ್ಷತೆ ವಹಿಸಿದ್ದರು. ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರಾದ ಬಿ.ಕೆ.ಇಮ್ತಿಯಾಝ್, ಶ್ರೀನಾಥ್ ಕುಲಾಲ್, ಟಿ.ಎನ್. ರಮೇಶ್, ಅಯಾಝ್ ಕ್ರಷ್ಣಾಪುರ, ರಿಲಯನ್ಸ್ ಯೂತ್ ಅಸೋಸಿಯೇಷನ್ ನ ಮಾರ್ಗ ದರ್ಶಕರಾದ ಹುಸೈನ್ ಹಾಜಿ, ರಿಲಯನ್ಸ್ ಓವರ್ಸೀಸ್ ಸದಸ್ಯ ಹುಸೈನ್ ಶಾಫಿ, ಸಮಾಜ ಸೇವಕ ಮುಹಮ್ಮದ್ ಶಮೀರ್, ಮುಂತಾದವರು ಉಪಸ್ಥಿತರಿದ್ದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಹುಸೈನ್ ಕಾಟಿಪಳ್ಳ ಪ್ರಸ್ತಾವನೆ ಗೈದರು. ಸಮದ್ ಕಾಟಿಪಳ್ಳ ನಿರೂಪಿಸಿದರು.


Spread the love