ಕಾಡಾನೆ ತುಳಿತಕ್ಕೆ ಲಾರಿ ಚಾಲಕ ಸಾವು

Spread the love

ಕಾಡಾನೆ ತುಳಿತಕ್ಕೆ ಲಾರಿ ಚಾಲಕ ಸಾವು

ಚಾಮರಾಜನಗರ: ಚಾಮರಾಜನಗರ ಜಿಲ್ಲೆಗ ಹೊಂದಿಕೊಂಡಿರುವ ತಮಿಳುನಾಡಿನ ಸತ್ಯಮಂಗಲಂ ತಾಲ್ಲೂಕಿನ ಬಣ್ಣಾರಿ ಅಮ್ಮನ್ ದೇವಸ್ಥಾನದ ಬಳಿ ಕಾಡಾನೆ ದಾಳಿಗೆ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಲಾರಿ ಚಾಲಕ ಬಲಿಯಾಗಿದ್ದಾರೆ.

ತಮಿಳುನಾಡಿನ ಸತ್ಯಮಂಗಲಂ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪ್ರಸಿದ್ಧ ಬಣ್ಣಾರಿ ಮಾರಿಯಮ್ಮನ್ ದೇವಾಲಯದಲ್ಲಿ ಘಟನೆ ನಡೆದಿದೆ. ಗುರುವಾರ ಮುಂಜಾನೆ ಕಾಡಿನಿಂದ ಬಂದ ಕಾಡಾನೆ ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮಳವಳ್ಳಿಯ ಲಾರಿ ಚಾಲಕ ಶ್ರೀನಿವಾಸ್ (33) ಎಂಬಾತನನ್ನು ಆನೆಯೊಂದು ಅಟ್ಟಿಸಿಕೊಂಡು ಹೋಗಿ ಸೊಂಡಿಲಿನಿಂದ ಹಿಡಿದು ತುಳಿದಿದೆ.  ಇದನ್ನು ಕಂಡ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಾನೆಯನ್ನು ಕಾಡಿಗೆ ಓಡಿಸಿದ್ದಾರೆ.

ಆ ನಂತರ ಆನೆ ತುಳಿತಕ್ಕೊಳಗಾಗಿದ್ದ ಚಾಲಕ ಶ್ರೀನಿವಾಸ್ ಅವರ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸತ್ಯಮಂಗಲದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ.  ಕಾಡಾನೆ ದಾಳಿಗೆ ಸಿಲುಕಿ ಲಾರಿ ಚಾಲಕ ಸಾವನ್ನಪ್ಪಿರುವ ಘಟನೆಯಿಂದ ಈ ಭಾಗದ ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ವ್ಯಾಪ್ತಿಯಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ವಾಹನ ಚಾಲಕರು ಜೀವ ಕೈಯ್ಯಲ್ಲಿಡಿಕೊಂಡು ಓಡಾಡುವಂತಾಗಿದೆ.


Spread the love

Leave a Reply

Please enter your comment!
Please enter your name here