ಕಾಡುಕೋಣ ಬೇಟೆಯಾಡಿದ ಬೇಟೆಗಾರರ ಬಂಧನ

Spread the love

ಕಾಡುಕೋಣ ಬೇಟೆಯಾಡಿದ ಬೇಟೆಗಾರರ ಬಂಧನ

ಹುಣಸೂರು: ನಾಗರಹೊಳೆ ಉದ್ಯಾನವನದಲ್ಲಿ ಕಾಡುಕೋಣ ಬೇಟೆಯಾಡಿದ್ದ ಇಬ್ಬರು ಬೇಟೆಗಾರರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದರೆ, ಉಳಿದ ಏಳು ಮಂದಿ ತಲೆಮರೆಸಿಕೊಂಡಿದ್ದಾರೆ.

ಉದ್ಯಾನವನದಂಚಿನ ಪಿರಿಯಾಪಟ್ಟಣ ತಾಲೂಕಿನ ಲಕ್ಷ್ಮಿಪುರ ನಿವಾಸಿಗಳಾದ ಅಶೋಕ, ಕಾಟಿಚಂದ್ರ ಬಂಧಿತರು. ಉದ್ಯಾನದ ಹುಣಸೂರು ವನ್ಯಜೀವಿ ವಲಯ ವ್ಯಾಪ್ತಿಯ ಕಚುವಿನಹಳ್ಳಿ ಶ್ರೇಣಿ ಅರಣ್ಯ ಪ್ರದೇಶದಲ್ಲಿ ಕಾಡುಕೋಣ ಬೇಟೆಯಾಡಿ ನಾಲ್ಕು ತೊಡೆಗಳು ಹಾಗೂ ಮಾಂಸವನ್ನು ಹೊತ್ತೊಯ್ದಿದ್ದರು. ಈ ಸಂಬಂಧ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿತ್ತು.

ಆರೋಪಿಗಳ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್ ನರಗುಂದ, ಎಸಿಎಫ್ ದಯಾನಂದ್ ಮಾರ್ಗದರ್ಶನದಲ್ಲಿ ಆರ್.ಎಫ್.ಓ.ಗಳಾದ ರತನ್‌ಕುಮಾರ್. ಗಣರಾಜ ಪಟಗಾರ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ ವೇಳೆ ಆನೆಚೌಕೂರು ವಲಯದಂಚಿನ ಲಕ್ಷ್ಮಿಪುರ ಗ್ರಾಮದಲ್ಲಿ ಇಬ್ಬರು ಆರೋಪಿಗಳು ಸಿಕ್ಕಿ ಬಿದ್ದಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದ್ದು, ಉಳಿದ ಆರೋಪಿಗಳ ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಡಿಸಿಎಫ್ ಹರ್ಷಕುಮಾರ್ ನರಗುಂದ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಹುಣಸೂರು ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿಗಳಾದ ರತನ್‌ಕುಮಾರ್. ಗಣರಾಜಪಟಗಾರ, ಡಿ.ಆರ್.ಎಫ್.ಓ ಗಳಾದ ಪ್ರಸನ್ನಕುಮಾರ್, ಎನ್.ಕೆ.ವೀರಭದ್ರ, ರಾಮು, ಮನೋಹರ್. ಅರಣ್ಯ ರಕ್ಷಕರಾಗಳಾದ ಲಾಲ್ ಮಹಮದ್, ಕೃಷ್ಣ, ಕುಶಲ್, ವಾಹನ ಚಾಲಕ ಶಿವು ಭಾಗವಹಿಸಿದ್ದರು.


Spread the love