ಕಾಪು:  ಅಂದರ್ ಬಾಹರ್ ಅಡ್ಡೆಗೆ ಪೊಲೀಸ್ ದಾಳಿ – 32 ಮಂದಿ ಬಂಧನ

Spread the love

ಕಾಪು:  ಅಂದರ್ ಬಾಹರ್ ಅಡ್ಡೆಗೆ ಪೊಲೀಸ್ ದಾಳಿ – 32 ಮಂದಿ ಬಂಧನ

ಉಡುಪಿ: ವಾಸದ ಮನೆಯೊಂದರಲ್ಲಿ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ ಆರೋಪದಲ್ಲಿ 32 ಮಂದಿಯನ್ನು ಕಾಪು ಪೊಲೀಸರು ಉಳಿಯಾರಗೋಳಿ ಸಮೀಪ ಕಲ್ಯಾ ಪಡುಮನೆ ಬಳಿ ಮಾರ್ಚ್ 23 ರಂದು ಬಂಧಿಸಿದ್ದಾರೆ.

ಬಂಧಿತರನ್ನು  ಸಂಪತ್ ಶೆಟ್ಟಿ, ಸೂರಜ್ ಶೆಟ್ಟಿ, ಹೇಮಚಂದ್ರ, ಪ್ರಶಾಂತ್ ಸುವಣ೯(37), ಬಿಕೆಟ್(34),  ಅಕ್ಷಯ್ (30), ಯಂಕಪ್ಪ (46),  ಸಿದ್ದೀಕ್ (41), ರಾಜೇಶ್ (41), ಸತೀಶ್(54), ರತ್ನಾಕರ್ ಶೆಟ್ಟಿ (34),  ನಾರಾಯಣ ಮೆಂಡನ್ (37), ವಿಶ್ವನಾಥ ಬೋಜ ಶೆಟ್ಟಿ (33), ವಿನೋಧ ಶೆಟ್ಟಿ (38), ಅಶ್ರಫ್ (40),  ವಿನಯ್ (31) ,  ಶಶಿಕುಮಾರ (30), ಕಿಶೋರ್ ಕುಮಾರ್ (41), ರಾಧಾಕೃಷ್ಣ(54), ಪ್ರಿತೇಶ(26), ಮಣಿಕಂಠ(32),  ಚೇತನ್ (29), ಚರಣ್ ಕುಮಾರ್ (38), ಅಶ್ವತ್ (30), ರಕ್ಷಿತ್ (24), ಪಾಂಡು ಟಿ (32), ಅನ್ವರ್,  ಸಂತೋಷ್ (30),  ಅರ್ಪಿತ್ (32),  ಪ್ರಜ್ವಲ್ (27),  ಪ್ರಶಾಂತ್ (23),  ಬೋಜರಾಜ್(47) ಎಂದು ಗುರುತಿಸಲಾಗಿದೆ.

ಬಂಧಿತರು ಕಲ್ಯಾ ಪಡುಮನೆಯಲ್ಲಿ ಶ್ರೀಕರ್ ಶೆಟ್ಟಿಯವರ ಮನೆಯಲ್ಲಿ ಜುಗಾರಿ ಆಟ ಆಡುತ್ತಿದ್ದು ಆಟವನ್ನು ತುಳಸಿ ದಿನೇಶ್ ಶೆಟ್ಟಿ ಸೇರಿಸಿಕೊಂಡು ಆಡಿಸುತ್ತಿರುವುದಾಗಿ ತಿಳಿಸಿದ್ದಾರೆ.

ಬಂಧಿತರಿಂದ ಇಸ್ಪೀಟ್ ಜುಗಾರಿ ಆಟ ಆಡಲು ಬಳಸಿದ ಸ್ವತ್ತುಗಳಾದ ವಿವಿಧ ಬಣ್ಣಗಳ ಇಸ್ಪೀಟ್ ಎಲೆಗಳು – 4 ಸೆಟ್, 3,37,400/- ರೂಪಾಯಿ ನಗದು ಹಣ, 37 ಮೊಬೈಲ್ ಫೋನ್ ಗಳು, ತರ್ಪಾಲ್ -1, 7 ಕಾರುಗಳು, 6 ಮೋಟಾರ್ ಸೈಕಲ್ ಗಳು, 2 ಆಟೋ ರಿಕ್ಷಾಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love