
Spread the love
ಕಾಪು: ಚಲಿಸುತ್ತಿದ್ದ ರಿಕ್ಷಾದ ಮೇಲೆ ಉರುಳಿದ ಬೃಹತ್ ಗಾತ್ರದ ಮರ – ಇಬ್ಬರು ಮೃತ್ಯು
ಉಡುಪಿ: ಚಲಿಸುತ್ತಿದ್ದ ರಿಕ್ಷಾವೊಂದರ ಮೇಲೆ ಮರವೊಂದು ಬಿದ್ದು ಇಬ್ಬರು ಮೃತಪಟ್ಟ ಘಟನೆ ಕಾಪು – ಶಿರ್ವ ರಸ್ತೆಯ ಮಲ್ಲಾರು ಚಂದ್ರನಗರ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ಮೃತರನ್ನು ಶಿರ್ವ ಶಾಂತಿಗುಡ್ಡೆಯ ಪುಷ್ಪಾ ಮತ್ತು ಕೃಷ್ಣ ಎಂದು ಗುರುತಿಸಲಾಗಿದೆ.
ಉಡುಪಿಯಲ್ಲಿ ಗುರುವಾರ ರಾತ್ರಿ ಏಕಾಏಕಿಯಾಗಿ ಗಾಳಿ ಮತ್ತು ಸಿಡಿಲಿನಿಂದ ಕೂಡಿ ಮಳೆಯಾಗಿದ್ದು ಗಾಳಿಯ ತೀವ್ರತೆಗೆ ಮಜೂರು ಮಸೀದಿಯ ಬಳಿ ಚಲಿಸುತ್ತಿದ್ದ ರಿಕ್ಷಾದ ಮೇಲೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದಿದ್ದು ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದು, ರಿಕ್ಷಾಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಗ್ನಿಶಾಮಕ ದಳ ಪೊಲೀಸರು, ಹಾಗೂ ಸ್ಥಳೀಯರಿಂದ ಮರ ತೆರವು ಕಾರ್ಯಾಚರಣೆ ನಡೆಯುತ್ತಿದೆ.
Spread the love