ಕಾಪು ಜನಸಂಕಲ್ಪ ಕಾರ್ಯಕ್ರಮ – ವಾಹನ ಪಾರ್ಕಿಂಗ್ ವ್ಯವಸ್ಥೆಯ ವಿವರ

Spread the love

ಕಾಪು ಜನಸಂಕಲ್ಪ ಕಾರ್ಯಕ್ರಮ – ವಾಹನ ಪಾರ್ಕಿಂಗ್ ವ್ಯವಸ್ಥೆಯ ವಿವರ

ಉಡುಪಿ: ಕಾಪು ಪೇಟೆಯಲ್ಲಿ ನವೆಂಬರ್ 7 ರಂದು ನಡೆಯಲಿರುವ ಜನಸಂಕಲ್ಪ ಕಾರ್ಯಕ್ರಮದ ಪ್ರಯುಕ್ತ ವಾಹನ ಪಾರ್ಕಿಂಗ್ ಗಾಗಿ ಸ್ಥಳಗಳನ್ನು ನಿಗದಿಪಡಿಸಲಾಗಿದೆ.

ಕಾರ್ಯಕ್ರಮದ ಪ್ರಯುಕ್ತ ಆಗಮಿಸುವ ಎಲ್ಲಾ ವಾಹನಗಳು ರಾಹೆ 66 ರ ಪೊಲಿಪು ಜಂಕ್ಷನ್ ಬಳಿ ನಿಲ್ಲಿಸಿ ವಾಹನಗಳಿಂದ ಜನರು ಇಳಿದ ಬಳಿಕ ಗಣ್ಯರ ಹಾಗೂ ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ಬಗ್ಗೆ ಈ ಕೆಳಕಂಡ ಸ್ಥಳಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಕಾಪು ವೃತ್ತ ನಿರೀಕ್ಷಕರ ಪ್ರಕಟಣೆ ತಿಳಿಸಿದೆ.

  • ವಿಐಪಿ ವಾಹನಗಳ ಪಾರ್ಕಿಂಗ್ – ಕಾಪು ಬಂಟರ ಸಂಘದ ಮೈದಾನ
  • ಶಿರ್ವ ಕಡೆಯಿಂದ ಆಗಮಿಸುವ ದ್ವಿಚಕ್ರ ಹಾಗೂ ಇತರ ಲಘು ವಾಹನಗಳು – ಕಾಪು ಶ್ರೀ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಎದುರಿನ ಖಾಲಿ ಸ್ಥಳ
  • ಕಾರ್ಯಕ್ರಮಕ್ಕೆ ಆಗಮಿಸುವ ಬಸ್ಸು ಟೆಂಪೋ ಹಾಗೂ ಇತರ ಘನ ವಾಹಗಳ ಪಾರ್ಕಿಂಗ್ – ಕಾಪು ಶ್ರೀ ಹಳೆ ಮಾರಿಯಮ್ಮ ದೇವಸ್ಥಾನದ ಎದುರಿನ ಖಾಲಿ ಜಾಗ
  • ಕಾರ್ಯಕ್ರಮಕ್ಕೆ ಆಗಮಿಸುವ ದ್ವಿಚಕ್ರ ವಾಹನ ಮತ್ತು ಇತರ ಲಘು ವಾಹನಗಳ ಪಾರ್ಕಿಂಗ್ – ಕಾಪು ಆಶಿಯಾನ್ ಅಪಾರ್ಟ್ ಮೆಂಟ್ ಬಳಿಯ ಖಾಲಿ ಜಾಗ
  • ದ್ವಿಚಕ್ರ ಮತ್ತು ಲಘು ವಾಹನಗಳ ಪಾರ್ಕಿಂಗ್ – ಕಾಪು ಶ್ರೀ ಹೊಸ ಮಾರಿಯಮ್ಮ ದೇವಸ್ಥಾನದ ಎದುರಿನ ಮೈದಾನ
  • ದ್ವಿಚಕ್ರ ವಾಹನಗಳ ಪಾರ್ಕಿಂಗ್ – ಕಾಪು ಮಾರ್ಕೆಟ್ ಬಳಿಯಲ್ಲಿರುವ ಖಾಲಿ ಜಾಗ
  • ಕಾರ್ಯಕ್ರಮಕ್ಕೆ ಆಗಮಿಸುವ ಬಸ್ಸು ಟೆಂಪೋ ಹಾಗೂ ಇತರ ಘನ ವಾಹನಗಳ ಪಾರ್ಕಿಂಗ್ – ಲಾಲಾಜಿ ಆರ್ ಮೆಂಡನ್ ಅವರ ನಿವಾಸದ ಎದುರಿನ ಖಾಲಿ ಜಾಗ


Spread the love

Leave a Reply

Please enter your comment!
Please enter your name here