ಕಾಪು (ದಕ್ಷಿಣ) ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಶಾಂತಲತಾ ಶೆಟ್ಟಿ ಆಯ್ಕೆ

Spread the love

ಕಾಪು (ದಕ್ಷಿಣ) ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಶಾಂತಲತಾ ಶೆಟ್ಟಿ ಆಯ್ಕೆ

ಉಡುಪಿ: ಕಾಪು (ದಕ್ಷಿಣ) ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರಾಗಿ ಮಾಜಿ ಪುರಸಭಾ ಸದಸ್ಯೆ ಶಾಂತಲತಾ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ.

ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಹಾಗೂ ಕಾಪು ಬ್ಲಾಕ್ ಅಧ್ಯಕ್ಷರಾದ  ನವೀನ್ ಚಂದ್ರ ಸುವರ್ಣ ಅವರ ಶಿಫಾರಸಿನ ಮೇರೆಗೆ , ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಅವರ ಸೂಚನೆಯಂತೆ ಉಡುಪಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ ಅವರು ಶ್ರೀಮತಿ ಶಾಂತಲತಾ ಶೆಟ್ಟಿ ಅವರಿಗೆ ನೇಮಕಾತಿ ಆದೇಶವನ್ನು ನೀಡಿದ್ದಾರೆ.

ಇದುವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಪ್ರಭಾ ಶೆಟ್ಟಿ ಅವರು ಸ್ಥಾನಕ್ಕೆ ಈ ನೂತನ ಆಯ್ಕೆಯನ್ನು ಮಾಡಲಾಗಿದೆ.


Spread the love