ಕಾಪು: ಮನೆ ಕಳವು ಹಾಗೂ ವಾಹನ ಕಳವು ಪ್ರಕರಣಗಳ ಆರೋಪಿಯ ಬಂಧನ

Spread the love

ಕಾಪು: ಮನೆ ಕಳವು ಹಾಗೂ ವಾಹನ ಕಳವು ಪ್ರಕರಣಗಳ ಆರೋಪಿಯ ಬಂಧನ

ಉಡುಪಿ: ಮೂಳೂರು ಎಸ್ ಎಸ್ ರೋಡ್ ಶ್ರೀ ಸಾಯಿ ವಾರ್ಚರ್ ಫ್ಲ್ಯಾಟ್ ನಿಂದ ಚಿನ್ನಾಭರಣ ಹಾಗೂ ಇತರೇ ಸೊತ್ತುಗಳನ್ನು ಕಳವು ಮಾಡಿದ ಆರೋಪಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಮೂಳೂರು ನಿವಾಸಿ ವಾಜೀದ್ ಜೆ (25) ಮತ್ತು ಕಡಿಯಾಳಿ ನಿವಾಸಿ ಶಹನಾಜ್ (32) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ ಚಿನ್ನಾಭರಣ, ವಾಹನ ಸೇರಿದಂತೆ ಒಟ್ಟು 3.38 ಲಕ್ಷ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ವಾಜೀದ್ ವಿರುದ್ದ ಈ ಹಿಂದೆ ಹಾಸನ ಜಿಲ್ಲೆಯ ಆಲೂರು, ಅರಸಿಕೆರೆ ಗ್ರಾಮಾಂತರ, ಅರೆಹಳ್ಳಿ, ಗಂಡಸಿ, ಪಣಂಬೂರು, ಸುರತ್ಕಲ್, ಮುಲ್ಕಿ, ಕಾರವಾರದ ಮಂಕಿ ಪೊಲೀಸ್ ಠಾಣೆಗಳಲ್ಲಿ ಒಟ್ಟು 10 ಪ್ರಕರಣಗಳು ದಾಖಲಾಗಿವೆ.

ಬಂಧನ ಕಾರ್ಯಾಚರಣೆಯಲ್ಲಿ ಹಾಕೆ ಅಕ್ಷಯ್ ಮಚೀಂದ್ರಾ ಪೊಲೀಸ್ ಅಧೀಕ್ಷಕರು ಉಡುಪಿ ಮತ್ತು ಎಸ್‌.ಟಿ ಸಿದ್ಧಲಿಂಗಪ್ಪ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ರವರ ನಿರ್ದೇಶನದಂತೆ, ವಿಜಯ ಪ್ರಸಾದ್ ಪೊಲೀಸ್ ಉಪಾಧೀಕ್ಷಕರು, ಕಾರ್ಕಳ, ಉಪವಿಭಾಗ ರವರ ಮಾರ್ಗದರ್ಶನದಲ್ಲಿ, ಕೆ., ಪೂವಯ್ಯ ವೃತ್ತ ನಿರೀಕ್ಷಕರು ಕಾಪು ರವರ ನೇತೃತದಲ್ಲಿ, ಕಾರ್ಯಾಚರಣೆ ನಡೆಸಿದ್ದು, ಶೈಲ ಡಿ ಮುರಗೋಡ ಪಿ.ಎಸ್‌.ಐ (ಕಾಸು), ಕಾಪು ಠಾಣೆ ಮುಂದಾಳತದಲಿ.. ಪ್ರೊ ಪಿಎಸ್ಐ ಮಹಾಂತೇಶ ಜಾಬಗೌಡ, ಕಾಪು ಠಾಣೆ ಹಾಗೂ ಕಾಪು ವೃತ್ತ ನಿರೀಕ್ಷಕರ ಅಪರಾಧ ಪತ್ತೆ ತಂಡದ ಪ್ರವೀಣ ಕುಮಾರ್‌, ರಾಜೇಶ್‌, ನಾರಾಯಣ, ಹೇಮರಾಜ್, ಸಂದೇಶ ಮತ್ತು, ಕಾಪು ಠಾಣೆಯ ಸ್ವಾಮೀ ಡಿ.ಎಸ್, ಗಣೇಶ್‌ ಶೆಟ್ಟಿ, ಚಾಲಕ ಜಗದೀಶ್, ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿ ದಿನೇಶ್‌ ಮೊದಲಾದವರು ಕಾರ್ಯಾಚರಣೆಯಲಿ, ಭಾಗವಹಿಸಿರುತ್ತಾರೆ.


Spread the love