ಕಾಪು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೀನಾ ಡಿಸೋಜಗೆ ಚೂರಿ ಇರಿತ: ಆರೋಪಿ ವಶಕ್ಕೆ

Spread the love

ಕಾಪು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೀನಾ ಡಿಸೋಜಗೆ ಚೂರಿ ಇರಿತ: ಆರೋಪಿ ವಶಕ್ಕೆ

ಪಡುಬಿದ್ರೆ: ಕಾಪು ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರೀನಾ ಡಿಸೋಜ (35) ಎಂಬವರಿಗೆ ವ್ಯಕ್ತಿಯೊರ್ವ ಚೂರಿ ಇರಿದ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಗಾಯಾಳು ರೀನಾ ಡಿಸೋಜ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಡಿತದ ಚಟ ಹೊಂದಿರುವ ಆರೋಪಿ, ಕ್ಲುಲ್ಲಕ ಕಾರಣಕ್ಕೆ ಸಂಬಂಧಿಸಿ ಈ ಕೃತ್ಯ ಎಸಗಿದ್ದಾನೆ. ರೀನಾ ಡಿಸೋಜ ನೆರೆ ಮನೆಯ ಮಹಿಳೆಯೊಂದಿಗೆ ಮಾತನಾಡತ್ತಿದ್ದಾಗ ಏಕಾಏಕಿ ಬಂದ ಆರೋಪಿ ಚೂರಿಯಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love