ಕಾಪು: ವಾಹನಗಳ ಬ್ಯಾಟರಿ ಕಳವು ಮಾಡುತ್ತಿದ್ದ ಕಳ್ಳರ ಬಂಧನ

Spread the love

ಕಾಪು: ವಾಹನಗಳ ಬ್ಯಾಟರಿ ಕಳವು ಮಾಡುತ್ತಿದ್ದ ಕಳ್ಳರ ಬಂಧನ

ಕಾಪು: ಕಾಪು ಕಟಪಾಡಿ ಪಡುಬಿದ್ರಿ ಶಿರ್ವ ಕಾರ್ಕಳ ಬೆಳ್ಮಣ್ ಮುಂತಾದ ಕಡೆಗಳಲ್ಲಿ ನಿಲ್ಲಿಸಿದ್ದ ಲಾರಿ-ಟೆಂಪೋ ಇತ್ಯಾದಿ ವಾಹನಗಳ ಬ್ಯಾಟರಿ ಕಳವು ಮಾಡಿ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಕಾಪು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಗಳನ್ನು ಮಹಮ್ಮದ್ ಶರೀಫ್ ಕಾಪು , ಅಲ್ತಾಫ್ ಚಂದ್ರ ನಗರ ,ಅಬ್ದುಲ್ ರೆಹಮಾನ್ ಮೂಳೂರು, ಫರ್ಜೀನ್ ಅಹಮ್ಮದ್ ಮೂಳೂರು, ಅಫ್ಜಲ್ ರೆಹಮಾನ್ ಮೂಳೂರು, ಮಹಮ್ಮದ್ ಇಜಾಜ್ ಮೂಳೂರು ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳು ಕಾಪು ಕಟಪಾಡಿ ಪಡುಬಿದ್ರಿ ಶಿರ್ವ ಕಾರ್ಕಳ ಬೆಳ್ಮಣ್ ಮುಂತಾದ ಕಡೆಗಳಲ್ಲಿ ನಿಲ್ಲಿಸಿದ್ದ ಲಾರಿ-ಟೆಂಪೋ ಇತ್ಯಾದಿ ವಾಹನಗಳ ಬ್ಯಾಟರಿ ಕಳವು ಮಾಡಿ ಮಾರಾಟ ಮಾಡುತ್ತಿದ್ದರು. ಆರೋಪಿಗಳಿಂದ 22 ಬ್ಯಾಟರಿ, ಮೂರು ಕಾರು ಹಾಗೂ ಇತರೆ ಸ್ವತ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ ವಿಷ್ಣುವರ್ಧನ್ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕ ಕುಮಾರ ಚಂದ್ರ ಇವರ ನಿರ್ದೇಶನದಂತೆ ಕಾರ್ಕಳ ಪೊಲೀಸ್‌ ಉಪಾಧೀಕ್ಷಕರಾದ ವಿಜಯಪ್ರಸಾದ್ ಇವರ ಮಾರ್ಗದರ್ಶನದಲ್ಲಿ ಕಾಪು ವೃತ್ತ ನಿರೀಕ್ಷಕರಾದ ಪ್ರಕಾಶ್ ಇವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು ಪಿಎಸ್ಐ ತಿಮ್ಮೇಶ್ ಬಿ ಎನ್‌, ರಾಘವೇಂದ್ರ, ಶಿರ್ವ ಪಿಎಸೈ ಶ್ರೀಶೈಲ ಆರ್ ಅಪರಾಧ ಪತ್ತೆ ತಂಡದ ಪ್ರವೀಣ್ ಕುಮಾರ್‌, ನಾರಾಯಣ, ರಾಜೇಶ್, ಹೇಮರಾಜ್, ಸಂದೇಶ, ಆನಂದ, ರಘು, ಸಂತೋಷ್‌, ಶಿವಾನಂದ ಮೊದಲಾದವರು ಭಾಗವಹಿಸಿದ್ದರು.


Spread the love