
ಕಾಪು, ಶಿರ್ವ ಸೇರಿದಂತೆ ವಿವಿಧ ಪಿಎಸೈಗಳ ವರ್ಗಾವಣೆ
ಉಡುಪಿ: ಜಿಲ್ಲೆಯ ಕಾಪು, ಶಿರ್ವ ಸೇರಿದಂತೆ ವಿವಿಧ ಠಾಣೆಗಳ ಪಿಎಸ್ ಐ ಗಳನ್ನು ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ಶನಿವಾರ ಆದೇಶ ಹೊರಡಿಸಿದ್ದಾರೆ.
ಶಿರ್ವ ಠಾಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಿಎಸೈ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶ್ರೀಶೈಲ ದುಂಡಪ್ಪ ಮುರಗೋಡು ಅವರನ್ನು ಕಾಪು ಪೊಲೀಸ್ ಠಾಣೆಗೆ ಹಾಗೂ ಕಾಪುವಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಪಿಎಸೈ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಘವೇಂದ್ರ ಸಿ ಅವರನ್ನು ಶಿರ್ವ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.
ಅಲ್ಲದೆ ಪುತ್ತೂರು ಗ್ರಾಮಾಂತರ ಠಾಣೆಯ ಪಿಎಸೈ ಅಮೀನ್ ಸಾಬ್ ಮೌಲಸಾಬ್ ಅತ್ತಾರ್ ಅವರನ್ನು ಯಲ್ಲಾಪುರ ಠಾಣೆಗೆ, ಜಾನಕಿ ಕೇ ಅವರನ್ನು ಪುಂಜಾಲಕಟ್ಟೆ ತನಿಖಾ ಪಿಎಸೈ ಆಗಿ, ಪುಂಜಾಲಕಟ್ಟೆ ತನಿಖೆ ವಿಭಾಗದ ಪಿಎಸೈ ಕುಟ್ಟಿಮೇರಾ ಅವರನ್ನು ಪುತ್ತೂರು ಸಂಚಾರ ಠಾಣಗೆ, ಉತ್ತರಕನ್ನಡ ಜಿಲ್ಲೆಯ ಚಿತ್ತಾಕುಲ ಠಾಣೆಯ ಪಿಎಸೈ ಮಹಾಂತಪ್ಪ ಕುಂಬಾರ ಅವರನ್ನು ಸಿದ್ದಾಪುರ ಠಾಣೆ ಹಾಗೂ ರೇಣುಕಾ ಡಿವಿ ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆಗೊಳಿಸ ಆದೇಶ ಹೊರಡಿಸಲಾಗಿದೆ