ಕಾಪು: ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದ 16 ಮಂದಿ ವಶಕ್ಕೆ; ರೂ 1.69 ಲಕ್ಷ ಮೌಲ್ಯದ ಸೊತ್ತು ವಶ

Spread the love

ಕಾಪು: ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಡುತ್ತಿದ್ದ 16 ಮಂದಿ ವಶಕ್ಕೆ; ರೂ 1.69 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಶಿವಾನಂದ ನಗರದ ಬಬ್ಬುಸ್ವಾಮಿ ದೈವಸ್ಥಾನದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣಕ್ಕಿಟ್ಟು ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 16 ಮಂದಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಭುಜಂಗ , ಶೇಖರ ಮೊಯಿಲಿ, ಸಂಜೀವ ಮೊಯಿಲಿ , ಶ್ರೀಶ , ಕಿಟ್ಟ, ಪ್ರಕಾಶ ನಾರಾಯಣ, ಮುಬಾರಕ್ , ಅಣ್ಣಪ್ಪ , ರಂಜಿತ್ , ತನುಜಯ , ಅತೀಶ್ , ರಮೇಶ , ಪ್ರಜ್ವಲ್ ಪೂಜಾರಿ , ಯತೀಶ್ ಕುಮಾರ , ಶರತಕುಮಾರ ಎಂದು ಗುರುತಿಸಲಾಗಿದೆ.

ಕಾಪು ಠಾಣಾ ಪಿ ಎಸ್ ಐ, ಐ ಆರ್ ಗಡ್ಡೇಕರ್ ಅವರು ವಿಶೇಷ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಮೂಡಬೆಟ್ಟು ಗ್ರಾಮದ ಶಿವಾನಂದ ನಗರದ ಬಬ್ಬುಸ್ವಾಮಿ ದೈವಸ್ಥಾನದ ಸಮೀಪ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಟ ಆಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು ದಾಳಿ ನಡೆಸಿ 16 ಮಂದಿಯನ್ನು ವಶಕ್ಕೆ ಪಡೆದು ಅವರಲ್ಲಿದ್ದ ಒಟ್ಟು 13 ಮೋಬೈಲ್, ಇಸ್ಪೀಟ್ ಆಟಕ್ಕೆ ಬಳಸಿದ ನಗದು ರೂ 16,375/- ಇಸ್ಪೀಟ್ ಎಲೆಗಳು, ನೆಲಕ್ಕೆ ಹಾಸಿದ ಹಳೇ ದಿನ ಪತ್ರಿಕೆಗಳು ಹಾಗೂ ಸ್ಥಳದಲ್ಲಿದ್ದ 07 ವಾಹನಗಳನ್ನು ಮಹಜರ್ ಮುಖೇನ ಸ್ವಾದೀಪಡಿಸಿಕೊಂಡಿದ್ದಾರೆ. ಸ್ವಾಧೀನ ಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ 1,69,375/- ರೂ ಆಗಿರುತ್ತದೆ.

ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು


Spread the love