ಕಾಫಿ ತೋಟದಲ್ಲಿ ಗಾಯಾಳು ಕಾಡಾನೆ ಪತ್ತೆ

Spread the love

ಕಾಫಿ ತೋಟದಲ್ಲಿ ಗಾಯಾಳು ಕಾಡಾನೆ ಪತ್ತೆ

ಬೇಲೂರು: ಕಾಲಿಗೆ ಗಾಯವಾಗಿರುವ ಹಿನ್ನಲೆಯಲ್ಲಿ ಕಾಡಾನೆಯೊಂದು ಕಾಫಿತೋಟದಲ್ಲಿ ವಾಸ್ತವ್ಯ ಹೂಡಿರುವುದು ಬಿಕ್ಕೋಡು ಹೋಬಳಿ ವ್ಯಾಪ್ತಿಯಲ್ಲಿ ನಡೆದಿದೆ.

ಕಳೆದೊಂದು ವರ್ಷದಿಂದ ಕಾಡಾನೆಗಳ ಹಿಂಡು ಈ ವ್ಯಾಪ್ತಿಯಲ್ಲಿ ಅಡ್ಡಾಡುತ್ತಾ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಬೆಳೆಗಾರರು ಮತ್ತು ರೈತರನ್ನು ಕಂಗೆಡಿಸಿತ್ತು. ಈ ನಡುವೆ ಹಿಂಡಿನಿಂದ ಬೇರ್ಪಟ್ಟ ಈ ಆನೆ ಬೇಲೂರು ಬಿಕ್ಕೋಡು ಹೋಬಳಿ ಕಾಫಿ ಎಸ್ಟೇಟ್ ಗೆ ಬಂದಿದ್ದು, ಇದೀಗ ಅದರ ಕಾಲಿಗೆ ಗಾಯವಾಗಿದ್ದು ಕುಂಟುತ್ತಾ ಸಾಗುತ್ತಿದೆ. ಇದನ್ನು ಗಮನಿಸಿದ ಸ್ಥಳೀಯ ಜನರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆ ಇದ್ದಂತಹ ಸ್ಥಳವನ್ನು ಗಮನಿಸಿ ಪರಿಶೀಲಿಸಿದಾಗ ಅದು ಗುಂಡಿನಿಂದ ಕಾಲಿಗೆ ಗಾಯವಾಗಿಲ್ಲ ಬದಲು ಅದರ ಕಾಲು ಹುಣ್ಣಿನಿಂದ ಗಾಯವಾಗಿದೆ. ಇದರಿಂದ ನಡೆಯಲಾಗದ ನಿಂತಲ್ಲೇ ನಿಂತಿದ್ದು, ಆನೆಗಳ ಗುಂಪಿನ ಜತೆ ಮತ್ತೆ ಸೇರಬಹುದು ಎಂದು ತಿಳಿಸಿದ್ದಾರೆ.

ಕಾಡಾನೆಗಳು ಸಾಮಾನ್ಯವಾಗಿ ಗುಂಪಾಗಿ ಬರುವುದು ಸಾಮಾನ್ಯ ಆದರೆ ಈ ಕಾಡಾನೆ ಗಾಯಗೊಂಡಿರುವ ಕಾರಣದಿಂದ ಆನೆ ಗುಂಪಿನಿಂದ ಬೇರ್ಪಟ್ಟಿದೆ. ಒಟ್ಟು ಸುಮಾರು ಎಂಟು ಆನೆಗಳಿದ್ದು ನಾವು ಸುತ್ತಮುತ್ತಲಿನ ಗ್ರಾಮಸ್ಥರು ಕಾಫಿ ತೋಟದ ಮಾಲೀಕರಿಗೆ, ಕೆಲಸಗಾರರಿಗೆ ಈ ಭಾಗಗಳಲ್ಲಿ ಕಾಡಾನೆಯಿರುವ ಮಾಹಿತಿ ರವಾನೆ ಮಾಡಿರುವುದಾಗಿ ತಿಳಿಸಿದ್ದಾರೆ.


Spread the love

Leave a Reply

Please enter your comment!
Please enter your name here