ಕಾಫಿ ತೋಟದಲ್ಲಿ ಬೀಡು ಬಿಟ್ಟ ಕಾಡಾನೆಗಳು

Spread the love

ಕಾಫಿ ತೋಟದಲ್ಲಿ ಬೀಡು ಬಿಟ್ಟ ಕಾಡಾನೆಗಳು

ಸಕಲೇಶಪುರ: ಕಾಡಾನೆ ಗುಂಪೊಂದು ಹಲಸುಲಿಗೆ, ಕಿರಳ್ಳಿ ಮತ್ತು ಹಸಿಡೆ ಗ್ರಾಮದ ಕಾಫಿತೋಟದಲ್ಲಿ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಭಯದಲ್ಲಿ ದಿನ ಕಳೆಯುವಂತಾಗಿದೆ.

ಕಾಡಾನೆಗಳು ಕಾಫಿತೋಟಗಳ ಮಧ್ಯೆ ಅಡ್ಡಾದಿಡ್ಡಿ ಓಡಾಡಿ ಹಲಸುಲಿಗೆ. ಕಿರೇಹಳ್ಳಿ. ಹಸಿಡೆ ಗ್ರಾಮದಲ್ಲೇ ಕಾಡಾನೆಗಳ ಹಿಂಡು  ಬೀಡು ಬಿಟ್ಟಿದ್ದು. ಕಾಫಿ. ಬಾಳೆ. ಮೆಣಸು ಮತ್ತು ಬಗನೆ ಮರಗಳನ್ನು ಬಿಡದೆ ಬೆಳೆ ನಾಶ ಮಾಡುತ್ತಿವೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹಸಿಡೆಯ ಲಕ್ಷ್ಮಣಗೌಡರ(ಕೆರೋಡಿ ಲಕ್ಷ್ಮಣಗೌಡ) ಕಾಫಿ ತೋಟದಲ್ಲಿಯೂ ಕೂಡ ಕಾಡಾನೆಗಳು ಬೆಳೆ ನಾಶ ಮಾಡಿವೆ. ಈ ಭಾಗದ ಎಲ್ಲ ಕಾಫಿತೋಟದ ಮಾಲೀಕರು ಆನೆ ಹಾವಳಿಯಿಂದ ತೋಟದಲ್ಲಿ ಕೆಲಸ ಮಾಡಿಸಲಾಗದೆ ತೋಟವನ್ನು ಹಾಳುಬಿಡುವ ಅಥವಾ ಮಾರಾಟ ಮಾಡುವ ಪರಿಸ್ಥಿತಿಗೆ ತಲುಪಿದ್ದಾರೆ. ಈ ಹಿಂದೆ ತಾಲೂಕು ಪಂಚಾಯಿತಿ ಸದಸ್ಯೆ ಚೈತ್ರಾ ಅವರ ಕಾರನ್ನು ಕಾಡಾನೆ ಅಡ್ಡಗಟ್ಟಿ ಕೂದಲೆಳೆಯಲ್ಲಿ ತಾಯಿ ಮಗು ಪಾರಾಗಿದ್ದರು. ಹಲಸುಲಿಗೆ ಕಾಫಿಬೋರ್ಡ್ ರಸ್ತೆಯಲ್ಲಿ ರಾಜಣ್ಣ ಎಂಬುವರ ಕಾಫಿ ಪ್ಲಾಂಟರ್ ಬಲಿತೆಗೆದು ಕೊಂಡಿತ್ತು. ಈಗ ಈ ಕಾಡಾನೆಗಳ ಹಿಂಡು  ಊರಿನ ರಸ್ತೆಗಳಲ್ಲೆಲ್ಲ ರಾತ್ರಿ ಹಗಲೆನ್ನದೆ ಓಡಾಡುತ್ತಿರುವುದರಿಂದ ಕಾಡಾನೆಯ ಗುಂಪು ಜನರಿಗೆ ಪ್ರಾಣಹಾನಿ ಮಾಡುವ ಮೊದಲು ಅರಣ್ಯಾಧಿಕಾರಿಗಳು ಕಾಡಿಗೆ ಅಟ್ಟುವ ಕ್ರಮವನ್ನು ತೆಗೆದುಕೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.


Spread the love