
ಕಾರಿಗೆ ಲಾರಿ ಡಿಕ್ಕಿ: ನವವಿವಾಹಿತೆ ಸಾವು
ಗುಂಡ್ಲುಪೇಟೆ: ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪತ್ನಿ ಸಾವನ್ನಪ್ಪಿ ಪತಿ ಗಂಭೀರ ಗಾಯಗೊಂಡಿರುವ ಘಟನೆ ಪಟ್ಟಣದ ಶೆಲ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಸಮೃದ್ಧಿ(22) ಮೃತಪಟ್ಟ ದುರ್ದೈವಿ. ಪತಿ ನಾಗೇಂದ್ರ ಸ್ವಾಮಿ ಗಂಭೀರ ಗಾಯಗೊಂಡವರು. ಸಮೃದ್ದಿ ಮತ್ತು ನಾಗೇಂದ್ರಸ್ವಾಮಿ ಅವರು ಅವರಿ ತಮ್ಮ ಊರಿನಿಂದ ಗುಂಡ್ಲುಪೇಟೆ ಕಡೆಗೆ ಸ್ಯಾಂಟ್ರೋ ಕಾರಿ (ಕೆಎ 01 ಎಂಜಿ 5938) ನಲ್ಲಿ ತೆರಳುತ್ತಿದ್ದ ವೇಳೆ ತಮಿಳುನಾಡಿನ ಮೂಲದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನ ಮುಂಭಾಗ ಜಖಂಗೊಂಡಿದ್ದು ಸಮೃದ್ಧಿ ಸಾವನ್ನಪ್ಪಿದ್ದರೆ, ನಾಗೇಂದ್ರ ಸ್ವಾಮಿ ಗಂಭೀರ ಗಾಯಗೊಂಡಿದ್ದಾರೆ. ಮೃತ ಸಮೃದ್ಧಿ ತಾಲ್ಲೂಕು ಎಪಿಎಂಸಿ ಮಾಜಿ ಅಧ್ಯಕ್ಷ ಹಾಗೂ ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಹಸಗೂಲಿ ಗ್ರಾಮದ ಗಂಗಾಧರಪ್ಪ ಅವರ ಮೊಮ್ಮಗಳಾಗಿದ್ದಾರೆ. ಇತ್ತೀಚೆಗಷ್ಟೆ ಇವರ ವಿವಾಹವಾಗಿತ್ತು.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆಗೆ ಕಳುಹಿಸಲಾಗಿದೆ. ಗಂಭೀರ ಗಾಯಗೊಂಡ ನಾಗೇಂದ್ರ ಸ್ವಾಮಿಯನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.