ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

Spread the love

ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಮಂಗಳೂರು: ಕಾರಿನಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕೇರಳ ರಾಜ್ಯದ ಮಂಜೇಶ್ವರ ತಾಲೂಕಿನ ಪಾತೂರು ಕಜೆ ನಿವಾಸಿ ನಾಸಿರ್ ಎಂದು ಗುರುತಿಸಲಾಗಿದೆ.

ದ.ಕ ಜಿಲ್ಲಾ ಪೊಲೀಸು ಅಧೀಕ್ಷಕರಾದ ಋಷಿಕೇಶ್ ಭಗವಾನ್ ಸೋನಾವಣೆ , ಐ.ಪಿ.ಎಸ್ ರವರ ನಿರ್ದೇಶನದಂತೆ ಬಂಟ್ವಾಳ ಡಿ ವೈ ಎಸ್ಪಿ ವೆಲೈಂಟಿನ್ ಡಿ ಸೋಜಾ ರವರ ಸೂಚನೆ ಯಂತೆ ಬಂಟ್ವಾಳ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಟಿ ಡಿ ನಾಗರಾಜರವರ ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸು ಠಾಣಾ ಪಿ.ಎಸ್.ಐ ವಿನೋದ್ ಎಸ್.ಕೆ ರವರು ಸಿಬ್ಬಂದಿಗಳಾದ ಹೆಚ್.ಸಿ ಗಳಾದ ಪ್ರಸನ್ನ , ಜಯರಾಮ ಕೆ.ಟಿ , ಪ್ರತಾಪ್ ರೆಡ್ಡಿ , ಲೋಕೇಶ , ಹೇಮ ರಾಜ್ ಹಾಗೂ ವಿನಾಯಕ ರವರು ಬಂಟ್ವಾಳ ತಾಲೂಕು ವಿಟ್ಲ ಪಡೂರು ಗ್ರಮದ ಕೊಡಂಗಾಯಿ ಎಂಬಲ್ಲಿ ವಾಹನ ತಪಾಸಣೆ ನಡೆಸುವ ಸಮಯ 2 ಕೆ.ಜಿ ತೂಕದ 20 ಸಾವಿರ ರೂಪಾಯಿ ಬೆಲೆಬಾಳುವ ಗಾಂಜಾವನ್ನು ಕಾರು ಕೆಎ 20 ಝಡ್ 3143 ನೇ ಮಾರುತಿ ಆಲ್ಲೋ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ 2 ಲಕ್ಷ ರೂಪಾಯಿ ಬೆಲೆ ಬಾಳುವ ಕಾರು ಸಮೇತ ಗಾಂಜಾವನ್ನು ಸ್ವಾಧೀನಪಡಿಸಿಕೊಂಡು ಆರೋಪಿ ನಾಸೀರ್ ನನ್ನು ಬಂಧಿಸಿದ್ದಾರೆ.

ಪ್ರಕರಣದ ಆರೋಪಿಗಳಾದ ಬಾಕ್ರಬೈಲಿನ ಬಾರಿಕ್ ಹಾಗೂ ಪಾತೂರಿನ ಮುಸ್ತಾಫರವರು ತಲೆ ಮರೆಸಿಕೊಂಡಿದ್ದು ಪೊಲೀಸರು ಪತ್ತೆ ಕಾರ್ಯ ಮುಂದುವರಿಸಿರುತ್ತಾರೆ . ಪ್ರಕರಣದ ತನಿಖೆಯನ್ನು ಬಂಟ್ವಾಳ ಪೊಲೀಸು ವೃತ್ತ ನಿರೀಕ್ಷಕರಾದ ಟಿ.ಡಿ ನಾಗರಾಜ್ ರವರು ಮುಂದುವರಿಸಿರುತ್ತಾರೆ .


Spread the love

Leave a Reply

Please enter your comment!
Please enter your name here