ಕಾರು ಡಿಕ್ಕಿ – ಕಾರವಾರ ಮಾಜಿ ಜಿಪಂ ಸದಸ್ಯರಿಗೆ ಗಂಭೀರ ಗಾಯ

Spread the love

ಕಾರು ಡಿಕ್ಕಿ – ಕಾರವಾರ ಮಾಜಿ ಜಿಪಂ ಸದಸ್ಯರಿಗೆ ಗಂಭೀರ ಗಾಯ

ಕುಂದಾಪುರ: ಕಾರೊಂದು ಡಿವೈಡರ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಕಾರವಾರ ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯ ರತ್ನಾಕರ ನಾಯಕ್‌ ಅವರು ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ನಾಗೂರಿನಲ್ಲಿ ಸೋಮವಾರ ಸಂಭವಿಸಿದೆ.

ಕುಂದಾಪುರದಿಂದ ಕಾರವಾರ ಕಡೆಗೆ ಸಾಗುತ್ತಿದ್ದ ಮಾಜಿ ಜಿಲ್ಲಾ ಪಂಚಾಯತ್‌ ಸದಸ್ಯ ರತ್ನಾಕರ ನಾಯಕ್‌ ಅವರ ಕಾರು ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯ ಡಿವೈಡರ್‌ ಗೆ ಡಿಕ್ಕಿ ಹೊಡೆದು ಬಳಿಕ ಪಕ್ಕದ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಗಂಭೀರ ಗಾಯಗೊಂಡ ರತ್ನಾಕರ್‌ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love