ಕಾರು ಢಿಕ್ಕಿ: ಪಾದಾಚಾರಿ ಸ್ಥಳದಲ್ಲಿಯೇ ಮೃತ್ಯು

Spread the love

ಕಾರು ಢಿಕ್ಕಿ: ಪಾದಾಚಾರಿ ಸ್ಥಳದಲ್ಲಿಯೇ ಮೃತ್ಯು

ಕುಂದಾಪುರ: ರಸ್ತೆ ದಾಟುತ್ತಿದ್ದ ವೇಳೆಯಲ್ಲಿ ಕಾರು ಢಿಕ್ಕಿಯಾದ ಪರಿಣಾಮ ಪಾದಾಚಾರಿಯೋರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ ದಾರುಣ ಘಟನೆ ಗುರುವಾರ ಸಂಜೆ ಇಲ್ಲಿನ ನಾಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ನಾಗೂರು ನಿವಾಸಿ ಸದಾಶಿವ ಶ್ಯಾನುಭೋಗ್ (45) ಮೃತ ದುರ್ದೈವಿ.

ವ್ಯಾಕ್ಸ್ ವೋಗನ್ ಪೋಲೋ ಕಾರಿನಲ್ಲಿ ಕುಟುಂಬವೊಂದು ಭಟ್ಕಳದಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿತ್ತು. ನಾಗೂರಿನಲ್ಲಿ ಇದೇ ಸಂದರ್ಭ ಸದಾಶಿವ ಶ್ಯಾನುಭೋಗ ಅವರು ಹೆದ್ದಾರಿ ದಾಟಲು ಯತ್ನಿಸಿದ್ದು ವೇಗವಾಗಿ ಬಂದ ಕಾರು ಢಿಕ್ಕಿ ಹೊಡೆದಿದ್ದು, ಅಪಘಾತದ ತೀವ್ರತೆಗೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಬೈಂದೂರು ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love