ಕಾರ್ಕಳ: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ

Spread the love

ಕಾರ್ಕಳ: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ

ಕಾರ್ಕಳ: ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಬೋಳಪದವು ಎಂಬಲ್ಲಿ ಅ.12ರಂದು ಸಂಜೆ ವೇಳೆ ನಡೆದಿದೆ.

ನಾಪತ್ತೆಯಾದವರನ್ನು ಸವಿತಾ ಪೂಜಾರಿ (36) ಮತ್ತು ಅವರ ಮಕ್ಕಳಾದ ವಿಷ್ಣು (10) ಹಾಗೂ ಅಶ್ಮಿತಾ ಎಂದು ಗುರುತಿಸಲಾಗಿದೆ. ಸವಿತಾ ಪತಿಯನ್ನು ಬಿಟ್ಟು, ತಾಯಿ ಮನೆ ಯಲ್ಲಿ ವಾಸವಾಗಿದ್ದು, ಈಕೆ ಇಬ್ಬರು ಮಕ್ಕಳೊಂದಿಗೆ ಮುಂಡ್ಕೂರಿನ ನಾನಿಲ್ತಾರಿನಲ್ಲಿರುವ ಅಜ್ಜಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆ ಯಾಗಿದ್ದಾರೆ.

ವಾರದ ಹಿಂದೆ ಈಕ ಉಮೇಶ್ ಎಂಬಾತನನ್ನು ಮದುವೆಯಾಗಿವುದಾಗಿ ತನ್ನ ತಮ್ಮನ್ನಲ್ಲಿ ಹೇಳಿದ್ದು, ಅದಕ್ಕೆ ಅವರು ಒಪ್ಪಲಿಲ್ಲ. ಇದೀಗ ಆಕೆ ಉಮೇಶ್ ಜೊತೆ ಹೋಗಿರಬಹುದು ಎಂದು ಮನೆಯವರು ಶಂಕಿಸಿದ್ದಾರೆ. ಈ ಬಗ್ಗೆ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love