ಕಾರ್ಕಳ: ಉದ್ಯಮದಲ್ಲಿ ನಷ್ಟ – ಯುವಕ ಆತ್ಮಹತ್ಯೆ

Spread the love

ಕಾರ್ಕಳ: ಉದ್ಯಮದಲ್ಲಿ ನಷ್ಟ – ಯುವಕ ಆತ್ಮಹತ್ಯೆ

ಕಾರ್ಕಳ: ಹೈನುಗಾರಿಕೆ ಉದ್ಯಮದಲ್ಲಿ ನಷ್ಟ ಅನುಭವಿಸಿದ ಬೇಸರದಲ್ಲಿ ಯುವಕನೋರ್ನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮರ್ಣೆ ಗ್ರಾಮದ ಕುರ್ಪಾಡಿ ಎಂಬಲ್ಲಿ ನಡೆದಿದೆ.

ಮೃತ ಯುವಕನನ್ನು ಕುರ್ಪಾಡಿ ದಿ. ಗೋಪಾಲ ಪೂಜಾರಿಯವರ ಮಗ ಶ್ರೀನಿವಾಸ ಪೂಜಾರಿ(25) ಎಂದು ಗುರುತಿಸಲಾಗಿದೆ.

ಶ್ರೀನಿವಾಸ ಪೂಜಾರಿ ವೆಲ್ಡಿಂಗ್ ಶಾಪ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು ಅದರೊಂದಿಗೆ ಹೈನುಗಾರಿಕೆಯ ಉದ್ಯಮವನ್ನು ಸಹ ನಡೆಸುತ್ತಿದ್ದರು.

ಹೈನುಗಾರಿಕೆಯಲ್ಲಿ ನಷ್ಟವನ್ನು ಹೊಂದಿದ ಕಾರಣದಿಂದ ಬೇಸರಗೊಂಡ ಶ್ರೀನಿವಾಸ ಮನೆ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love