ಕಾರ್ಕಳ: ಕಲ್ಲು ಕೋರೆ ಕ್ರಶರ್‌ನಲ್ಲಿ ಸ್ಫೋಟ ಕಾರ್ಮಿಕ ಸಾವು

Spread the love

ಕಾರ್ಕಳ: ಕಲ್ಲು ಕೋರೆ ಕ್ರಶರ್‌ನಲ್ಲಿ ಸ್ಫೋಟ ಕಾರ್ಮಿಕ ಸಾವು
 
ಕಾರ್ಕಳ: ಕಾರ್ಕಳದ ನಿಟ್ಟೆ ಗ್ರಾಮದ ಗುಂಡ್ಯಡ್ಕ ಎಂಬಲ್ಲಿ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳದಲ್ಲಿ ಅವಘಡ ಸಂಭವಿಸಿ ಕಲ್ಲು ಕ್ವಾರೆಯ ಕಾರ್ಮಿಕನೋರ್ವ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಆ. 1ರಂದು ಸಂಭವಿಸಿದೆ. ಮೃತ ಕಾರ್ಮಿಕ ಬಾಗಲಕೋಟೆ ಮೂಲದ ವೆಂಕಟೇಶ್‌ (32) ಎಂದು ಗುರುತಿಸಲಾಗಿದೆ.

ಕಾರ್ಮಿಕ ಕೆಲಸ ಮಾಡುತ್ತಿದ್ದ ವೇಳೆ ಕಲ್ಲು ಬಿದ್ದು ಮೃತಪಟ್ಟಿದ್ದಾಗಿ ಹೇಳಲಾಗುತಿದ್ದರೂ ಸ್ಥಳಿಯರು ಕ್ರಶರ್‌ನಲ್ಲಿ ಸ್ಫೋಟ ನಡೆದು ಮೃತಪಟ್ಟಿದ್ದಾಗಿ ಶಂಕೆ ವ್ಯಕ್ತಪಡಿಸಿದ್ದಾರೆ. ಕ್ವಾರೆಯಲ್ಲಿ ಭಾರಿ ನ್ಪೋಟದ ಶಬ್ದ ಕೇಳಿ ಬಂದಿದ್ದಾಗಿ ತಿಳಿಸಿದ್ದಾರೆ. ಗಂಭೀರ ರೀತಿಯಲ್ಲಿ ಗಾಯಗೊಂಡಿದ್ದು ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಲಾಗಿದ್ದು, ಅಲ್ಲಿ ಮೃತಪಟ್ಟರು.

ಘಟನ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Spread the love