ಕಾರ್ಕಳ ತಾಲೂಕು ಕಚೇರಿ ಸಿಬ್ಬಂದಿ ಬಾವಿಗೆ ಹಾರಿ ಆತ್ಮಹತ್ಯೆ

Spread the love

ಕಾರ್ಕಳ ತಾಲೂಕು ಕಚೇರಿ ಸಿಬ್ಬಂದಿ ಬಾವಿಗೆ ಹಾರಿ ಆತ್ಮಹತ್ಯೆ

ಕಾರ್ಕಳ: ಕಳೆದ ಕೆಲ ವರ್ಷಗಳಿಂದ ಕಾರ್ಕಳ ತಾಲೂಕು ಕಚೇರಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹಿಳಾ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರವಿವಾರ ರಾತ್ರಿ ನಡೆದಿದೆ.

ಮೃತ ಯುವತಿಯನ್ನು ಕಾರ್ಕಳ ಹುಡ್ಕೊ ಕಾಲನಿ ನಿವಾಸಿ ಸುಶ್ಮೀತಾ (25) ಎಂದು ಗುರುತಿಸಲಾಗಿದೆ/

ಮೃತ ಸುಶ್ಮಿತ, ತಂದೆ – ತಾಯಿ ಹಾಗೂ ಓರ್ವ ಸಹೋದರಿಯನ್ನು ಅಗಲಿದ್ದು, ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.

ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Please enter your comment!
Please enter your name here