ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಗಣೇಶ್ ನಾಯಕ್, ಕಾರ್ಯದರ್ಶಿಯಾಗಿ ಬಾಲಕೃಷ್ಣ ಭೀಮಗುಳಿ ಆಯ್ಕೆ

Spread the love

ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಗಣೇಶ್ ನಾಯಕ್, ಕಾರ್ಯದರ್ಶಿಯಾಗಿ ಬಾಲಕೃಷ್ಣ ಭೀಮಗುಳಿ ಆಯ್ಕೆ

ಕಾರ್ಕಳ: ಕಾರ್ಯನಿರತ ಪತ್ರಕರ್ತರ ಸಂಘ ಕಾರ್ಕಳ ತಾಲೂಕು ಘಟಕ ಇದರ ನೂತನ ಅಧ್ಯಕ್ಷರಾಗಿ ವರದಿಗಾರ ಗಣೇಶ್ ನಾಯಕ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ವರದಿಗಾರ ಬಾಲಕೃಷ್ಣ ಭೀಮ ಗುಳಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಪ್ರಧಾನ ಕಾರ್ಯದರ್ಶಿ, ಕೋಶಾಧಿಕಾರಿ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯಿತು.

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸೂಚನೆಯಂತೆ ಉಡುಪಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಕಳ ತಾಲೂಕು ಘಟಕದ ಪದಾಧಿಕಾರಿಗಳ ಪುನಾರ್ ರಚನೆ ಪ್ರಕ್ರೀಯೆ ತಾಲೂಕು ಪ್ರವಾಸಿ ಕೇಂದ್ರದಲ್ಲಿ ಶನಿವಾರ ಜರುಗಿತು.

ಕಾರ್ಯಕರ್ತರ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ರಾಜೇಶ್ ಶೆಟ್ಟಿ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ ಆಯ್ಕೆ ಪ್ರಕ್ರೀಯೆ ನಡೆಸಿಕೊಟ್ಟರು.

ಗಣೇಶ್ ಸಾಣೂರು ಹಾಗು ಮಹಮ್ಮದ್ ಷರೀಫ್ ನಡುವೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಗಣೇಶ್ ಸಾಣೂರು ಅದ್ಯಕ್ಷ ಸ್ಥಾನಕ್ಕೆ ಆಯ್ಕೆ ಯಾದರು.

ಬಾಲಕೃಷ್ಣ ಭೀಮಗುಳಿ ಸರ್ವಾನುಮತದಿಂದ ಅವಿರೋಧ ಆಯ್ಕೆಗೊಂಡರು. ಕೋಶಾಧಿಕಾರಿ ರಾಂ ಅಜೆಕಾರ್ ಅವಿರೋಧವಾಗಿ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಹರೀಶ್ ಸಚ್ಚರಿಪೇಟೆ, ಜತೆಕಾರ್ಯದರ್ಶಿಯಾಗಿ ಹರೀಶ್ ಆಚಾರ್ಯ , ಕ್ರೀಡಾ ಕಾರ್ಯದರ್ಶಿ ಉದಯ್ ಮುಂಡ್ಕೂರ್, ಸಾಂಸ್ಕೃತಿಕ ಕಾರ್ಯದರ್ಶಿ ಹರಿಪ್ರಸಾದ್ ನಂದಳಿಕೆ ಅವಿರೋಧವಾಗಿ ಆಯ್ಕೆಗೊಂಡರು. ಜಿಲ್ಲಾ ಉಪಾಧ್ಯಕ್ಷ ಆರ್. ಬಿ ಜಗದೀಶ್, ಜಿಲ್ಲಾ ಸಮಿತಿ ಪ್ರತಿನಿಧಿ ಉದಯ್ ಮುಂಡ್ಕೂರ್ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಮೊಹಮ್ಮದ್ ಶರೀಪ್ ಹಾಗೂ ನಿಕಟಪೂರ್ವ ಕಾರ್ಯದರ್ಶಿ ಕೃಷ್ಣ ನಾಯ್ಕ್ ನೂತನ ಪದಾಧಿಕಾರಿಗಳಿಗೆ ದಾಖಲೆ ಹಸ್ತಾಂತರಿಸಿದರು. ಸದಸ್ಯರೆಲ್ಲರೂ ಉಪಸ್ಥಿತರಿದ್ದು ನೂತನ ಸಮಿತಿಗೆ ಅಭಿನಂದನೆ ಸಲ್ಲಿಸಿದರು.


Spread the love