ಕಾರ್ಕಳ: ಬಸ್ಸು – ಕಾರು ನಡುವೆ ಭೀಕರ ಅಫಘಾತ – ಮೂವರ ಸಾವು

Spread the love

ಕಾರ್ಕಳ: ಬಸ್ಸು – ಕಾರು ನಡುವೆ ಭೀಕರ ಅಫಘಾತ – ಮೂವರ ಸಾವು

ಕಾರ್ಕಳ: ಖಾಸಗಿ ಬಸ್ಸು ಮತ್ತು ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರ ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ನೆಲ್ಲಿಕಾರು ಬಳಿ ನಡೆದಿದೆ.

ಮೃತರನ್ನು ಆಂಧ್ರಪ್ರದೇಶ ಮೂಲದ ನಾಗರಾಜ್ (40) ಪ್ರತ್ಯುಷಾ (32) 2 ವರ್ಷದ ಮಗು ಎಂದು ಗುರುತಿಸಲಾಗಿದೆ.

ಪ್ರಾಥಮಿಕ ಮೂಲಗಳ ಪ್ರಕಾರ ಮೃತರು ತಮ್ಮ ಕಾರಿನಲ್ಲಿ ಧರ್ಮಸ್ಥಳದ ದೇವಸ್ಥಾನ ಭೇಟಿ ಮುಗಿಸಿ ಶೃಂಗೇರಿಗೆ ತೆರಳುತ್ತಿದ್ದರು ಎನ್ನಲಾಗಿದೆ.

ಕಾರ್ಕಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love