ಕಾರ್ಕಳ: ರಸ್ತೆಯಲ್ಲಿ ‘ಹ್ಯಾಪಿ ನ್ಯೂಯರ್’ ಬರೆಯಲು ಹೋದ ಇಬ್ಬರು ಯುವಕರಿಗೆ ಕಾರು ಡಿಕ್ಕಿ – ಸಾವು

Spread the love

ಕಾರ್ಕಳ: ರಸ್ತೆಯಲ್ಲಿ ‘ಹ್ಯಾಪಿ ನ್ಯೂಯರ್’ ಬರೆಯಲು ಹೋದ ಇಬ್ಬರು ಯುವಕರಿಗೆ ಕಾರು ಡಿಕ್ಕಿ – ಸಾವು

ಕಾರ್ಕಳ: ರಸ್ತೆಯಲ್ಲಿ ಹೊಸ ವರ್ಷಕ್ಕೆ ಶುಭಾಶಯ ಬರೆಯಲು ಮುಂದಾದ ಯುವಕರಿಬ್ಬರಿಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟ ಘಟನೆ ಗುರುವಾರ ರಾತ್ರಿ ಕಾರ್ಕಳ ತಾಲೂಕಿನ ಮೀಯಾರು ಕಾಜರಬೈಲು ಎಂಬಲ್ಲಿ ಸಂಭವಿಸಿದೆ.

ಮೃತ ಯುವಕರನ್ನು ಮೂಲತಃ ಬಾಗಲಕೋಟೆಯವರಾದ ಶರಣ್ (32) ಸಿದ್ದು (28) ಎಂದು ಗುರುತಿಸಲಾಗಿದೆ.

ಮೃತ ಯುವಕರು ಗುರುವಾರ ಮಧ್ಯರಾತ್ರಿ ರಸ್ತೆಯಲ್ಲಿ ಹ್ಯಾಪ್ಫಿ ನ್ಯೂಯರ್ ಎಂದು ಬರೆಯುತ್ತಿದ್ದ ಸಮಯದಲ್ಲಿ ವೇಗದಿಂದ ಬಂದ ಈಕೋ ಕಾರು ಯುವಕರಿಗೆ ಡಿಕ್ಕಿ ಹೊಡೆದ ಪರಿಣಾಮ ಒರ್ವ ಸ್ಥಳದಲ್ಲೇ ಮೃತಪಟ್ಟರೆ ಇನ್ನೋರ್ವ ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟಿದ್ದಾರೆ.

ಮೂಲತಃ ಬಾಗಲಕೋಟೆಯವರಾದ ಶರಣ್ ಮತ್ತು ಸಿದ್ದು ಜೆಸಿಬಿ ಮತ್ತು ಟಿಪ್ಪರ್ ಡ್ರೈವರ್ ಗಳಾಗಿ ಕೆಲಸ ಮಾಡುತ್ತಿದ್ದರು.

ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ


Spread the love