ಕಾರ್ಕಳ: 32 ವರ್ಷದ ರೆನಿಟಾ ನೇಣು ಬಿಗಿದು ಆತ್ಮಹತ್ಯೆ

Spread the love

ಕಾರ್ಕಳ: 32 ವರ್ಷದ ರೆನಿಟಾ  ನೇಣು ಬಿಗಿದು ಆತ್ಮಹತ್ಯೆ

ಕಾರ್ಕಳ: ಯುವತಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ನಿಟ್ಟೆ ಗ್ರಾಮದ ಪರ್ಪಲೆ ಎಂಬಲ್ಲಿ ಮಂಗಳವಾರ ನಡೆದಿದೆ.

ಮೃತ ಯುವತಿಯನ್ನು ಕಾರ್ಕಳ ನಿಟ್ಟೆ ಗ್ರಾಮದ ಪರ್ಪಲೆ ನಿವಾಸಿ ಜಾರ್ಜ್ ಡಿ’ಸೋಜಾ ಅವರ ಪುತ್ರಿ ರೆನಿಟಾ (32) ಎಂದು ಗುರುತಿಸಲಾಗಿದೆ.

ಮೃತ ರೆನಿಟಾ ರವರಿಗೆ 11 ವರ್ಷದ ಹಿಂದೆ ಮುಲ್ಕಿಯ ಕಿರಣ್ ನೊಂದಿಗೆ ಮದುವೆಯಾಗಿದ್ದು, ಮದುವೆಯಾಗಿ 6 ವರ್ಷದಲ್ಲೆ ನ್ಯಾಯಾಲಯದಲ್ಲಿ ವಿವಾಹ ವಿಚ್ಚೇದನ ಆಗಿರುತ್ತದೆ. ಮೃತೆ ರೆನಿಟಾ ರವರು ಕಳೆದ 2-3 ದಿನಗಳಿಂದ ತಲೆ ನೋವು ಆಗುತ್ತಿರುವುದಾಗಿ ತಿಳಿಸುತ್ತಿದ್ದು ಗುರುವಾರ ಮನೆಯ ಹಿಂಬದಿಯ ಹಾಡಿಯಲ್ಲಿ ಗೇರು ಮರದ ಗೆಲ್ಲಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕಾರ್ಕಳ ಗ್ರಾ ಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

Leave a Reply

Please enter your comment!
Please enter your name here