ಕಾಲುವೆ ದುರಸ್ತಿಗೆ ಮುಂದಾಗದ ನೀರಾವರಿ ಇಲಾಖೆ

Spread the love

ಕಾಲುವೆ ದುರಸ್ತಿಗೆ ಮುಂದಾಗದ ನೀರಾವರಿ ಇಲಾಖೆ

ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದಲ್ಲಿ ಕಳಪೆ ಕಾಮಗಾರಿಯ ಕಾರಣ ಕಾಲುವೆ ನಿರ್ಮಾಣ ಹಂತದಲ್ಲಿಯೇ ಮುರಿದು ಬಿದ್ದಿದ್ದು, ಅದನ್ನು ನಾಲ್ಕು ತಿಂಗಳು ಕಳೆದರೂ ನೀರಾವರಿ ಇಲಾಖೆಯ ಅಧಿಕಾರಿಗಳು ಸರಿಪಡಿಸದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಕೊಳ್ಳೇಗಾಲ ವಿಭಾಗದ ಕಾವೇರಿ ನೀರಾವರಿ ಇಲಾಖೆಯ ವತಿಯಿಂದ 50 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ರೈತರ ಜಮೀನಿಗೆ ನೀರು ಸರಾಗವಾಗಿ ಹರಿದು ಹೋಗಲು ಅನುಕೂಲವಾಗುವ ಉದ್ದೇಶದಿಂದ ಕಾಲುವೆಯ ಅಭಿವೃದ್ಧಿ ಕಾಮಗಾರಿಯನ್ನು ಕಳೆದ ಜೂನ್ ತಿಂಗಳಿಂದ ಪ್ರಾರಂಭಿಸಿ ತರಾತುರಿಯಲ್ಲಿ ಮುಗಿಸಲಾಗಿತ್ತು. ಹೀಗಾಗಿ ಆಗಸ್ಟ್‌ತಿಂಗಳಲಲ್ಲಿ ಕುಸಿದು ಬಿದ್ದಿತು. ಪರಿಣಾಮ ಮಳೆಯ ಕಾರಣದಿಂದ ನಿರಂತರವಾಗಿ ಕಾಲುವೆ ನೀರು ಹರಿದು ರೈತರ ಜಮೀನುಗಳಿಗೆ ಅಪಾರ ಪ್ರಮಾಣದಲ್ಲಿ ನುಗ್ಗಿ ಹಾನಿಯಾಗಿತ್ತು.

ಗುಣಮಟ್ಟದ ಕಬ್ಬಿಣವನ್ನು ಇದಕ್ಕೆ ಬಳಸದೆ ಇರುವುದು, ಕಾಲುವೆ ತಳಭಾಗಕ್ಕೆ ಕಾಂಕ್ರಿಟ್ ಸರಿಯಾಗಿ ಹಾಕದಿರುವುದು, ನಂತರ ಇದರ ಬದುಗಳಿಗೆ ಇಲ್ಲೇ ತೋಡಲಾಗಿದ್ದ ಮಣ್ಣನ್ನು ಸುರಿದಿರುವುದೇ ಕಾಲುವೆ ಕುಸಿಯಲು ಕಾರಣವಾಗಿದೆ. ಜತೆಗೆ ಸುಮಾರು 20ಕ್ಕೂ ಹೆಚ್ಚು ಎಕರೆ ಜಮೀನಿನಲ್ಲಿ ನೀರು ಜಲಾವೃತ್ತಗೊಂಡಿರುವ ಪರಿಣಾಮ ಬೆಳೆ ತೆಗೆಯಲು ಸಾಧ್ಯವಾಗಿಲ್ಲ ಎಂಬುವುದು ರೈತರ ಆರೋಪವಾಗಿದೆ.

ಕಳಪೆ ಕಾಮಗಾರಿ ಮಾಡಿದ ಜೆಇ ಹಾಗೂ ಗುತ್ತಿಗೆದಾರರ ವಿರುದ್ಧ ಯಾವುದೇ ಕ್ರಮವಹಿಸಿಲ್ಲ. ಜತೆಗೆ ತಕ್ಷಣವೇ ಕಾಲುವೆಯನ್ನು ದುರಸ್ತಿಪಡಿಸುವಂತೆ ಆಗಸ್ಟ್‌ನಲ್ಲಿ ಶಾಸಕ ಎನ್ ಮಹೇಶ್ ಹಾಗೂ ಮೇಲಾಧಿಕಾರಿಗಳು ಭೇಟಿ ನೀಡಿ ಕ್ರಮವಹಿಸುವಂತೆ ಸೂಚಿಸಿದರೂ ಸಹ ಸಂಬಂಧಪಟ್ಟ ನೀರಾವರಿ ಇಲಾಖೆ ಅಧಿಕಾರಿಗಳು ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಜೆಇ, ಗುತ್ತಿಗೆದಾರನ ವಿರುದ್ಧ ಸೂಕ್ತ ರೀತಿಯ ಕಾನೂನು ರೀತ್ಯಾ ಕ್ರಮವಹಿಸಿ ಕಪ್ಪುಪಟ್ಟಿಗೆ ಸೇರಿಸುವಂತೆ ರೈತರು ಆಗ್ರಹಿಸಿದ್ದಾರೆ.


Spread the love

Leave a Reply

Please enter your comment!
Please enter your name here