ಕಾಲೇಜು ವಿಡಿಯೋ ಪ್ರಕರಣ: ಸ್ವತಂತ್ರ ತನಿಖೆಯ ನಿಟ್ಟಿನಲ್ಲಿ ಸಿಐಡಿ ಗೆ ಹಸ್ತಾಂತರ – ಲಕ್ಷ್ಮೀ ಹೆಬ್ಬಾಳ್ಕರ್

Spread the love

ಕಾಲೇಜು ವಿಡಿಯೋ ಪ್ರಕರಣ: ಸ್ವತಂತ್ರ ತನಿಖೆಯ ನಿಟ್ಟಿನಲ್ಲಿ ಸಿಐಡಿ ಗೆ ಹಸ್ತಾಂತರ – ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ: ಕಾಲೇಜು ವಿಡಿಯೋ ಪ್ರಕರಣದ ತನಿಖೆ ಸ್ವತಂತ್ರವಾಗಿ ನಡೆಯುವ ನಿಟ್ಟಿನಲ್ಲಿ ಸಿಐಡಿ ಗೆ ವಹಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.

ಉಡುಪಿಯ ಕಾಲೇಜೊಂದರ ಶೌಚಾಲಯದಲ್ಲಿ ವಿಡಿಯೋ ಮಾಡಲಾಗಿದೆ ಎನ್ನಲಾದ ಪ್ರಕರಣ ಅತ್ಯಂತ ಸೂಕ್ಷ್ಮವಾದದ್ದು. ಹೆಣ್ಣುಮಕ್ಕಳಿಗೆ ಸಂಬಂಧಿಸಿದ ಮತ್ತು ವಿದ್ಯಾರ್ಥಿಗಳ ಭವಿಷ್ಯದ ವಿಷಯವಾಗಿರುವುದರಿಂದ ಸರಕಾರ ಮೊದಲಿಂದಲೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ತನಿಖೆ ಇನ್ನಷ್ಟು ಆಳವಾಗಿ ಮತ್ತು ಸ್ವತಂತ್ರವಾಗಿ ನಡೆಯಲಿ ಎನ್ನುವ ಕಾರಣಕ್ಕೆ ಸಿಐಡಿಗೆ ಒಪ್ಪಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .


Spread the love