ಕಾವೂರಿನಲ್ಲಿ ಮೊಸರುಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ಆರೋಪ: ಸಂಘಟಕರ ವಿರುದ್ಧ ಪ್ರಕರಣ ದಾಖಲು
ಮಂಗಳೂರು: ನಗರದ ಹೊರವಲಯದ ಕಾವೂರು ಬಳಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರುಕುಡಿಕೆ ಉತ್ಸವದಲ್ಲಿ ನಿಯಮಬಾಹಿರವಾಗಿ ಡಿ.ಜೆ. ಬಳಕೆ ಮಾಡಿರುವ ಆರೋಪದಲ್ಲಿ ಕಾವೂರು ಪೊಲೀಸರು ಆಯೋಜಕರು, ಸಂಘಟಕರ ಮೇಲೆ ಕೇಸು ದಾಖಲಿಸಿಕೊಂಡಿರುವುದು ವರದಿಯಾಗಿದೆ.
ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನಾನಾ ಉತ್ಸವ ಹಾಗೂ ಮೆರವಣಿಗೆ ಹಿನ್ನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಮಾರ್ಗಸೂಚಿ ಬಿಡುಗಡೆ ಮಾಡಿದ್ದರು. ಇದರಲ್ಲಿ ಮೆರವಣಿ ಗೆಗೆ ಡಿ.ಜೆ. ಬಳಕೆ ಮಾಡುವಂತಿಲ್ಲ ಎಂದು ಸ್ಪಷ್ಟ ನಿರ್ದೇಶನ ನೀಡಿದ್ದರು. ಆದರೂ ಉರುಂದಾಡಿಗುಡ್ಡೆಯ ಮೆರವಣಿಗೆಯಲ್ಲಿ ಡಿ.ಜೆ. ಬಳಕೆ ಮಾಡಲಾಗಿತ್ತು ಎನ್ನಲಾಗಿದೆ.
ಡಿ.ಜೆ. ಬಳಕೆ ಮಾಡಿರುವುದಕ್ಕೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗಿತ್ತು. ಕೂಡಲೇ ಕಾವೂರು ಪೊಲೀಸರು ಮಧ್ಯಪ್ರವೇಶಿಸಿ ಡಿ.ಜೆ. ಸ್ಥಗಿತಗೊಳಿಸಿ ಅದಕ್ಕೆ ಬಳಸಿದ ಉಪಕರಣಗಳನ್ನು ಮುಟ್ಟುಗೋಲು ಹಾಕಿದ್ದಾರೆ. ಇದು ಮಾತ್ರವಲ್ಲದೆ ಜನ್ಮಾಷ್ಟಮಿ ಕಾರ್ಯಕ್ರಮದ ಆಯೋಜಕರು ಹಾಗೂ ಡಿ.ಜೆ. ಸಂಗೀತ ಟ್ಯಾಬ್ಲೋ ವ್ಯವಸ್ಥೆ ಮಾಡಿದ ಸಂಘಟಕರ ಮೇಲೂ ಕಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.