ಕಾಶೀ ಮಠಾಧೀಶರ ಚಾತುರ್ಮಾಸ ಸಮಾಪನ

Spread the love

ಕಾಶೀ ಮಠಾಧೀಶರ ಚಾತುರ್ಮಾಸ ಸಮಾಪನ

ಮಂಗಳೂರು: ಶ್ರೀ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಶುಭ ಕೃತ ನಾಮ ಸಂವತ್ಸರದ ಚಾತುರ್ಮಾಸ ವ್ರತವು ಶನಿವಾರದಂದು ಮೃತ್ತಿಕಾ ವಿಸರ್ಜನೆ ಹಾಗೂ ಸೀಮೋಲಂಘನ ಬಳಿಕ ಸಮಾಪನ ಗೊಂಡಿತು .

ಶ್ರೀಗಳವರ ಚಾತುರ್ಮಾಸ ವ್ರತವು ಗೌಡ ಸಾರಸ್ವತ ಸಮಾಜದ ಪ್ರತಿಷ್ಠಿತ ಶ್ರೀ ವೆಂಕಟರಮಣ ದೇವಳದಲ್ಲಿ ವಿಜೃಂಭಣೆಯಿಂದ ನಡೆದಿದ್ದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು .

ಚಾತುರ್ಮಾಸ ವ್ರತದ ಕೊನೆಯದಿನವಾದ ಇಂದು ಶ್ರೀಗಳವರು ವ್ರತದ ಸಂದರ್ಭದಲ್ಲಿ ಪೂಜಿಸಲ್ಪಟ್ಟ ಮೃತ್ತಿಕೆಯನ್ನು ಶ್ರೀ ಮಹಾಮಾಯ ತೀರ್ಥದಲ್ಲಿ ಪೂಜೆ ಬಳಿಕ ಶ್ರೀಗಳವರ ಅಮೃತ ಹಸ್ತಗಳಿಂದ ವಿಸರ್ಜನೆ ಮಾಡಲಾಯಿತು ಬಳಿಕ ಶ್ರೀಗಳವರು ಮಹಾಮಾಯ ದೇವಳಕ್ಕೆ ಭೇಟಿಯಿತ್ತು ಸೀಮೋಲಂಘನ ಕಾರ್ಯಕ್ರಮ ಜರಗಿತು ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ವಿವಿಧ ದೇವಳ , ಮಠ ಮಂದಿರಗಳ ಪದಾಧಿಕಾರಿಗಳಿಂದ ಮಾಲಾರ್ಪಣೆ , ಪಾದಪೂಜೆ ಬಳಿಕ ಆಶೀರ್ವಚನ ನೆರವೇರಿತು . ಚಾತುರ್ಮಾಸ ಪ್ರಯುಕ್ತ ಶ್ರೀಗಳವರ ದಿಗ್ವಿಜಯ ಮಹೋತ್ಸವ ಕ್ಕೆ ದೇಶ ವಿದೇಶಗಳಿಂದ ಭಜಕರು ಆಗಮಿಸಲಿದ್ದು ಇದೇ ಬರುವ ಅಕ್ಟೋಬರ್ ತಿಂಗಳ ೧೫ ತಾರೀಕಿನಂದು ನಡೆಯಲಿದೆ ಎಂದು ಶ್ರೀ ದೇವಳದ ಆಡಳಿತ ಮೊಕ್ತೇಸರರಾದ ಅಡಿಗೆ ಬಾಲಕೃಷ್ಣ ಶೆಣೈ ತಿಳಿಸಿರುತ್ತಾರೆ .

ಚಿತ್ರ : ಮಂಜು ನೀರೇಶ್ವಾಲ್ಯ


Spread the love

Leave a Reply

Please enter your comment!
Please enter your name here