ಕಾಸರಗೋಡು:  ವಿವಾಹ ದಿಬ್ಬಣದ ಬಸ್ ಮಗುಚಿ ಆರು ಮಂದಿ ಸಾವು

Spread the love

ಕಾಸರಗೋಡು:  ವಿವಾಹ ದಿಬ್ಬಣದ ಬಸ್ ಮಗುಚಿ ಆರು ಮಂದಿ ಸಾವು

ಕಾಸರಗೋಡು: ಪುತ್ತೂರು ಕಡೆಯಿಂದ ಸುಳ್ಯ ಆಲೆಟ್ಟಿ ಮೂಲಕ ಪಾಣತ್ತೂರು ಕರಿಕೆ ಕಡೆಗೆ ಹೋಗುತ್ತಿದ್ದ ಮದುವೆ ದಿಬ್ಬಣದ ಖಾಸಗಿ ಬಸ್ ಪಾಣತ್ತೂರು ಬಳಿ ಪಲ್ಟಿಯಾಗಿದ್ದು ಆರು ಮಂದಿ ಮೃತಪಟ್ಟಿದ್ದಾರೆ.

ಪಾಣತ್ತೂರು ಬಳಿಯ ಕೊಡಗು ಜಿಲ್ಲಾ ವ್ಯಾಪ್ತಿಯ ಚೆತ್ತುಕಯ ಎಂಬಲ್ಲಿ ವರನ ಮನೆಯಲ್ಲಿ ಇದ್ದ ಮದುವೆ ಕಾರ್ಯಕ್ರಮಕ್ಕೆ ವಧುವಿನ ಊರಾದ ಕಾಸರಗೋಡು ಜಿಲ್ಲೆಯ ಈಶ್ವರಮಂಗಲದಿಂದ ವಧುವಿನ ದಿಬ್ಬಣ ಹೋಗುತ್ತಿತ್ತು ಎನ್ನಲಾಗಿದೆ. ವಧು ಮತ್ತು ಇತರರು ಟಿಟಿ ವಾಹನದಲ್ಲಿ ತೆರಳುತ್ತಿದ್ದರೆ ಹಿಂದಿನಿಂದ ಖಾಸಗಿ ಬಸ್ ನಲ್ಲಿ ಸುಮಾರು 40 ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದರು.

ಕಲ್ಲಪ್ಫಳ್ಲೀ –ಪಾಣತ್ತೂರು ಮಧ್ಯೆ ಕೇರಳದ ಕಾಸರಗೋಡು ಜಿಲ್ಲೆಗೆ ಸೇರಿದ ಪೆರಿಯಾರಂ ಎಂಬಲ್ಲಿ ಇಳಿಜಾರಿನಲ್ಲಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಮನೆಯೊಂದರ ಮೇಲೆ ಉರುಳಿ ಬಿದ್ದು ದುರಂತ ಸಂವಿಸಿದೆ.

ಸುಮಾರು 30ರಷ್ಟು ಮಂದಿಗೆ ಗಾಯಗಳಾಗಿದ್ದು, ಬಾಲಕ ಸಹಿತ ಆರು ಮಂದಿ ಮೃತಪಟ್ಟಿದ್ದು ಮೃತರ ವಿವರ ಇನ್ನಷ್ಟೆ ತಿಳಿಯಬೇಕಾಗಿದೆ. ಗಾಯಾಳುಗಳನ್ನು ಪಾಣತ್ತೂರು, ಪೂಡಂಕಲ್ಲು, ಕಾಂಞಂಗಾಡ್, ಕಣ್ಣೂರು, ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.


Spread the love