ಕಾಸರಗೋಡು: 25 ದಿನಗಳ ಹಸುಗೂಸಿನ ಗಂಟಲಲ್ಲಿ ಹಾಲು ಸಿಲುಕಿ ಸಾವು

Spread the love

ಕಾಸರಗೋಡು: 25 ದಿನಗಳ ಹಸುಗೂಸಿನ ಗಂಟಲಲ್ಲಿ ಹಾಲು ಸಿಲುಕಿ ಸಾವು
 
ಬದಿಯಡ್ಕ: ಇಲ್ಲಿನ ಉಕ್ಕಿನಡ್ಕ ನಿವಾಸಿ ಅಬ್ದುಲ್ ರಹಿಮಾನ್ ಎಂಬುವರ 25 ದಿನದ ಹಸುಗೂಸಿನ ಗಂಟಲಲ್ಲಿ ತಾಯಿಯ ಎದೆಹಾಲು ಸಿಲುಕಿ ಗುರುವಾರ ಮೃತಪಟ್ಟಿದೆ.

ಮಗುವಿಗೆ ತಾಯಿ ಎದೆಹಾಲು ನೀಡುತ್ತಿದ್ದಾಗ ಗಂಟಲಿನಲ್ಲಿ ಸಿಲುಕಿಕೊಂಡು ಅಸ್ವಸ್ಥಗೊಂಡಿತು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಲ್ಲಿ ಮಗು ಮೃತಪಟ್ಟಿದೆ.

ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


Spread the love