ಕಿಡ್ನಾಪ್ ಮಾಡಿ ಸುಲಿಗೆ ಮಾಡಿದ ಪ್ರಕರಣದ ಆರೋಪಿಯ ಬಂಧನ

Spread the love

ಕಿಡ್ನಾಪ್ ಮಾಡಿ ಸುಲಿಗೆ ಮಾಡಿದ ಪ್ರಕರಣದ ಆರೋಪಿಯ ಬಂಧನ

ಮಂಗಳೂರು: ಪಾಂಡೇಶ್ವರ ಠಾಣಾ ಪೊಲೀಸರಿಂದ ಕಿಡ್ನಾಪ್ ಮಾಡಿ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟು ಪೊಲೀಸ್ ಭದ್ರಿಕೆಗೆ ಪಡೆದ ಆರೋಪಿತನಿಂದ ಬೆಲೆ ಬಾಳುವ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿರುವ ಕುರಿತು ವರದಿಯಾಗಿದೆ.

ದಿನಾಂಕ 12-05-2023 ರಂದು 10-45 ಗಂಟೆಯಿಂದ 14-30 ರ ಮದ್ಯಾವಧಿಯಲ್ಲಿ ಮಂಗಳೂರು ನಗರದ ಅತ್ತಾವರ ಸ್ಮರಕ್ ರಸ್ತೆಯಲ್ಲಿರುವ ಮ್ಯಾಕ್ ಅಪಾರ್ಟ್ ಮೆಂಟ್ ನಲ್ಲಿ ವಾಸ್ತವ್ಯ ಇರುವ ಮಜೀಬ್ ಸೈಯದ್ ರವರನ್ನು ಅವರ ಪರಿಚಯದ ನೌಶಾಲ್ ಮತ್ತು ಪುಚ್ಚ ಎಂಬವರುಗಳು ಜೊತೆಯಾಗಿ ಸೇರಿ ಕಿಡ್ರಾಪ್ ಮಾಡಿ ಪಿಸ್ತೂಲ್ ತೋರಿಸಿ ಮುಜೀಬ್ ಸೈಯದ್ ರವರಿಂದ 5,00,000/- ರೂಪಾಯಿ ಹಣಕ್ಕೆ ಮತ್ತು ಒಂದು ಕಾರು ನೀಡುವಂತೆ ಒತ್ತಡವೇರಿದ್ದು ಅವರು ಕೊಡಲು ನಿರಾಕರಿಸಿದಾಗ ಅವರನ್ನು ಕಿಡ್ನಾಪ್ ಮಾಡಿ ಮುಜೀಬ್ ಸೈಯದ್ ರವರು ಉಪಯೋಗಿಸುತ್ತಿದ್ದ ಕೆಎ 19 ಎಂ. ಎಲ್ 4730 ನೊಂದಣಿ ಸಂಖ್ಯೆಯ ಕಾರು ಮತ್ತು ಅವರಲ್ಲಿದ್ದ 9535037501 ಮತ್ತು 9901475081 ನಂಬ್ರದ ಸೀಮ್ ಇದ್ದ ವಿವೋ ಕಂಪನಿಯ ಮೊಬೈಲ್ ಸಟ್ -01 ಮತ್ತು ನಗದು ಹಣ 18000/- ರೂಪಾಯಿ ಹಾಗೂ ಮುಜೀಬ್ ಸೈಯದ್ ರವರ ಮಗಳ ಕೈಯಲ್ಲಿದ್ದ OPPO ಕಂಪನಿಯ ಮೊಬೈಲ್ ಸೆಟ್-01 ಇವುಗಳನ್ನು ಸುಲಿಗೆ ಮಾಡಿಕೊಂಡು ಮುಜೀಬ್ ಸೈಯದ್ ರವರನ್ನು ಎಸ್. ಎಲ್ ಮಥಾಯಸ್ ರಸ್ತೆ, ಪಳ್ಳಿ, ಕಂಕನಾಡಿ, ಪಂಪುವಲ್, ಉದ್ದೋಡಿ, ಜಪ್ಪಿನಮೊಗರು, ಕರ್ಬಿಸ್ಥಾನ ರಸ್ತೆ ಮುಂತಾದ ಕಡೆಗಳಲ್ಲಿ ಸುತ್ತಾಡಿಸಿ, ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪಿಸ್ತೂಲ್ ತೋರಿಸಿ ವಾಪಾಸು 500000/- ರೂಪಾಯಿ ನಗದು ಹಣ ಮತ್ತು ಒಂದು ಕಾರು ನೀಡುವಂತೆ ಒತ್ತಡವೇರಿರುತ್ತಾರೆ. ನಂತರ ವಾಪಾಸು ಮಂಗಳೂರು ನಗರದ ಅತ್ತಾವರ ಸ್ವರಜ್ ರಸ್ತೆಯಲ್ಲಿರುವ ಮ್ಯಾಕ್ ಅಪಾರ್ಟ್ ಮೆಂಟ್ ಬಳಿಗೆ ವಾಪಾಸು ಕರೆದುಕೊಂಡು ಹೋಗಿ ಮುಜೀಬ್ ಸೈಯದ್ ರವರ ಹೆಂಡತಿ ಮಕ್ಕಳನ್ನು ಕಾರಿನ ಹತ್ತಿರಕ್ಕೆ ಬರಮಾಡಿಸಿ ಅವರನ್ನು ಕೂಡ ಕಾರಿನಲ್ಲಿ ಕುಳ್ಳಿತುಕೊಳ್ಳುವಂತೆ ಒತ್ತಾಯ ಪಡಿಸಿಸಿರುತ್ತಾರೆ. ಈ ಸಂದರ್ಭ ಮುಜೀಬ್ ಸೈಯದ್ ರವರು ಹಂಡತಿ ಮಕ್ಕಳನ್ನು ಕಾರಿನಲ್ಲಿ ಕುಳ್ಳಿರಿಸುವ ನಟನೆ ಮಾಡಿ ಕಾರಿನಿಂದ ಇಳಿದು ಕಾರಿನ ಹಿಂದಿನ ಸೀಟ್ ನಲ್ಲಿದ್ದ ತನ್ನ ಮಗಳನ್ನು ಕಾರಿನ ಡೋರ್ ತೆಗೆದು ಕಾರಿನಿಂದ ಏಕಾಏಕಿ ಸಡನ್ ಆಗಿ ಕೆಳಗೆ ಇಳಿಸಿರುತ್ತಾರೆ. ವಾಪಾಸು ಆರೋಪಿ ನೌಪಾಲ್ ಎಂಬಾತನು ಮುಜೀಬ್ ಸೈಯದ್ ಮತ್ತು ಮನೆಯವರನ್ನು ಪುನ: ಪುನ: ಕಾರಿನಲ್ಲಿ ಕುಳ್ಳಿತುಕೊಳ್ಳಲು ಒತ್ತಾಯ ಮಾಡಿದಾಗ ಅವರುಗಳು ಕುಳಿತುಕೊಳ್ಳದ ಇದ್ದಾಗ ನೌಪಾಲ್ ೩ ಟೊಪ್ಪಿ ನೌಪಾಲ್ ಮತ್ತು ಪುಚ್ಚ ಸ್ಥಳದಿಂದ ಮುಜೀಬ್ ಸೈಯದ್ ರವರ ಕೆಎ 19 ಎಂ. ಎಲ್ 4730 ಕಾರಿನೊಂದಿಗೆ ಪರಾರಿಯಾಗಿರುತ್ತಾರೆ. ಘಟನೆ ಬಗ್ಗೆ ಮುಜೀಬ್ ಸೈಯದ್ ರವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಮೊ. ನಂ. 61/2023 ಕಲಂ 392, 363, 34 ಭಾ. ದಂ.ಸಂ. ಯತ ಪ್ರಕರಣ: ದಾಖಲಾಗಿ ತನಿಖೆಯಲ್ಲಿರುತ್ತದೆ.

ಪ್ರಕರಣದಲ್ಲಿ ಆರೋಪಿಗಳು ಸುಲಿಗೆ ಮಾಡಿದ ಕೆಎ 19 ಎಂ. ಎಲ್ 4730 ಕಾರನ್ನು ಮಂಗಳೂರು ನಗರದ ನ್ಯೂ ಚಿತ್ರಾ ಜಂಕ್ಷನ್ ಬಳಿಯಿಂದ ದಿನಾಂಕ 12-05-2023 ರಂದು ರಾತ್ರಿ 8-30 ಗಂಟೆಗೆ ಮಂಗಳೂರು ದಕ್ಷಿಣ ಠಾಣಾ ಪೊಲೀಸರು ವಶಪಡಿಸಿಕೊಂಡಿದ್ದು ಸದ್ರಿ ಕಾರನ್ನು ನ್ಯಾಯಾಲಯದ ಆದೇಶದಂತೆ ವಾರೀಸುದಾರಿಗೆ ಬಿಟ್ಟುಕೊಡಲಾಗಿದೆ.

ಮಂಗಳೂರು: ನಗರದ ಗ್ರಾಮಾಂತರ ಪೊಲೀಸ್ ಠಾಣಾ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನೌಫಾಲ್ ಆ ಟೊಪ್ಪಿ ನೌಫಾಲ್, ಪ್ರಾಯ 31 ವರ್ಷ, ತಂದೆ-ಬಶೀರ್, ವಾಸ-ಸಿರಿಸೀಮೆ ನರ್ಸರಿ ಬಳಿ, ಬಜಾಲ್ ನಂತೂರು, ಪ್ರೈಸಲ್ ನಗರ, ಬಜಾಲ್ ಗ್ರಾಮ, ಮಂಗಳೂರು, ಎಂಬಾತನನ್ನು ದಿನಾಂಕ 24-08-2023 ರಂದು ಮಂಗಳೂರು ದಕ್ಷಿಣ ಠಾಣಾ ಪೊಲೀಸ್ ನಿರೀಕ್ಷಕರಾದ ಲೋಕೇಶ್ ಎ.ಸಿ. ರವರು ಪೊಲೀಸ್ ಭದ್ರಿಕೆಗೆ ಪಡೆದು ಕೂಲಂಕುಷವಾಗಿ ವಿಚಾರಿಸಿದಾಗ ಸುಲಿಗೆ ಮಾಡಿದ ಎರಡು ಮೊಬೈಲ್ ಸೆಟ್, ಕಾರಿನ ಕೀ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಆಟಿಕೆ ಪಿಸ್ತೂಲ್ ನ್ನು ತನ್ನ ಮನೆಯಲ್ಲಿ ಇಟ್ಟಿರುವುದಾಗಿ

ತನ್ನೊಪ್ಪಿಕೊಂಡಿದ್ದು, ಅವುಗಳನ್ನು ದಿನಾಂಕ 25-08-2023 ರಂದು ಸ್ವಾಧೀನಪಡಿಸಲಾಗಿದೆ. ಪ್ರಕರಣಕ್ಕೆ ಸಂಬಂಧಪಟ್ಟು ಮಂಗಳೂರು ನಗರದ ಪಡೀಲ್ ನಾಗುರಿ ಕಡೆಯ ಮೊಹಮ್ಮದ್ ವಿಶಾಕ್ ೧ ಪುಟ್ಟ ಎಂಬಾತನು ತಲೆಮರೆಸಿಕೊಂಡಿರುತ್ತಾನೆ


Spread the love