ಕಿತ್ತೂರು ಬಸಾಪುರ ಗ್ರಾಮದಲ್ಲಿ ಅದ್ಧೂರಿ ಜಾತ್ರೆ

Spread the love

ಕಿತ್ತೂರು ಬಸಾಪುರ ಗ್ರಾಮದಲ್ಲಿ ಅದ್ಧೂರಿ ಜಾತ್ರೆ

ಸರಗೂರು: ತಾಲೂಕಿನ ಕಿತ್ತೂರು ಬಸಾಪುರ ಗ್ರಾಮದ ಬೆಟ್ಟದ ಮೇಲಿರುವ ರವಿಸಿದ್ದೇಶ್ವರ, ಗವಿಸಿದ್ದೇಶ್ವರ ದೇವರ 4ನೇ ವರ್ಷದ ಜಾತ್ರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ಜರುಗಿತು.

ಜಾತ್ರೆ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳನ್ನು ಸಿಂಗರಿಸಲಾಗಿತ್ತು. ಇದಲ್ಲದೆ, ದೇವಸ್ಥಾನವನ್ನು ವಿವಿಧ ಬಣ್ಣಗಳಿಂದ ಸಿಂಗರಿಸಿ ಅಲಂಕೃತಗೊಳಿಸಲಾಗಿತ್ತು. 4ನೇ ವರ್ಷದ ಜಾತ್ರಾ ಮಹೋತ್ಸವದ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ದೇವರ ದರ್ಶನ ಪಡೆದು ಪುನೀತರಾದರು.

ಗ್ರಾಮದ ಸಮೀಪದಲ್ಲಿರುವ ಕಬಿನಿ ಜಲಾಶಯದಿಂದ ದೇವರ ಕಳಶ ಹೊತ್ತು ತರಲಾಯಿತು. ಕಾಳಮ್ಮ ದೇವರ ಸತ್ತಿಗೆ, ಮಹರ್ಷಿ ವಾಲ್ಮೀಕಿ ಭಾವಚಿತ್ರದೊಂದಿಗೆ ರವಿಸಿದ್ದೇಶ್ವರ, ಗವಿ ಸಿದ್ದೇಶ್ವರ ದೇವರ ವಿಗ್ರಹಗಳನ್ನು ದೇವಸ್ಥಾನದ ಬಳಿಗೆ ಕರೆತಂದು ಪೂಜೆ ಸಲ್ಲಿಸಲಾಯಿತು. ನಂತರ ಗ್ರಾಮಕ್ಕೆ ಕರೆತಂದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಗ್ರಾಮಸ್ಥರು ದೇವರಿಗೆ ನಾನಾ ಅಭಿಷೇಕಗಳನ್ನು ನೆರವೇರಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಇದೇ ವೇಳೆ ವಾದ್ಯಗೋಷ್ಠಿಗಳು ಮೊಳಗಿದವಲ್ಲದೆ, ಅನ್ನ ಸಂತರ್ಪಣೆ ನಡೆಯಿತು. ಗವಿಸಿದ್ದೇಶ್ವರ ಸೇವಾ ಸಮಿತಿ ಟ್ರಸ್ಟ್ ನ ಪದಾಧಿಕಾರಿಗಳು ಹಾಗೂ ಬಸಾಪುರ ಗ್ರಾಮಸ್ಥರು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಸ್ಥರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಅವರು ತಾಯಿ ನಾಗಮ್ಮ, ಜೆಡಿಎಸ್ ಮುಖಂಡ ಜಯಪ್ರಕಾಶ್, ಬಿಜೆಪಿ ಮುಖಂಡ ಡಾ.ಎಚ್.ವಿ.ಕೃಷ್ಣಸ್ವಾಮಿ ಅವರ ಆಪ್ತ ಸಹಾಯಕ ಶಿವಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹಾಗೂ ಶ್ರೀ ವಾಲ್ಮೀಕಿ ಮಹರ್ಷಿ ಸಹಕಾರ ಸಂಘದ ಅಧ್ಯಕ್ಷರಾದ ಕೆ.ಚಿಕ್ಕವೀರನಾಯಕ ಸೇರಿದಂತೆ ಗಣ್ಯರು ಭಾಗಿಯಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.


Spread the love

Leave a Reply

Please enter your comment!
Please enter your name here