ಕಿರಿಯ ವಿದ್ಯಾರ್ಥಿಯೊರ್ವನ ಮೇಲೆ ರ್‍ಯಾಗಿಂಗ್ – ಆರು ನರ್ಸಿಂಗ್‌ ವಿದ್ಯಾರ್ಥೀಗಳ ಬಂಧನ

Spread the love

ಕಿರಿಯ ವಿದ್ಯಾರ್ಥಿಯೊರ್ವನ ಮೇಲೆ ರ್‍ಯಾಗಿಂಗ್ – ಆರು ನರ್ಸಿಂಗ್‌ ವಿದ್ಯಾರ್ಥೀಗಳ ಬಂಧನ

ಮಂಗಳೂರು: ಜೂನಿಯರ್ ವಿದ್ಯಾರ್ಥಿಯೊರ್ವನ ಮೇಲೆ ರ್‍ಯಾಗಿಂಗ್ ನಡೆಸಿದ ಆರೋಪದ ಮೇಲೆ ಪ್ರಕರಣಕ್ಕೆ ಸಂಬಂಧಿಸಿ ಜು. 16 ರ ಶುಕ್ರವಾರ ನಗರದ ಖಾಸಗಿ ನರ್ಸಿಂಗ್ ಕಾಲೇಜಿನ 6 ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರ್ಥಿಯೋರ್ವನ ಮೇಲೆ ರ್‍ಯಾಗಿಂಗ್ ನಡೆಸಿದ ನಗರದ ಖಾಸಗಿ ನರ್ಸಿಂಗ್‌ ಕಾಲೇಜಿನ 6 ಮಂದಿ ವಿದ್ಯಾರ್ಥಿಗಳನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು   ಶ್ರೀಲಾಲ್ (20), ಶಾಹಿದ್ (20), ಅಮ್ಜಾದ್ (20), ಜುರೈಜ್ (20), ಹುಸೈನ್ (20) ಮತ್ತು ಲಿಮ್ಸ್ (20) ಎಂದು ಗುರುತಿಸಲಾಗಿದೆ.

ಫಿರ್ಯಾದಿದಾರ ವಿದ್ಯಾರ್ಥಿ ದೂರದಾರ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಜು.14 ರ ರಾತ್ರಿ 8 ಗಂಟೆಗೆ ಊಟಕ್ಕೆಂದು ಫಲ್ನೀರ್‌ನ ಫಿಲ್ ಫಿಲ್ ಹೋಟೆಲ್‌ ತೆರಳಿದ್ದ ಸಮಯದಲ್ಲಿ  ಅಲ್ಲಿ ವಿದ್ಯಾರ್ಥಿಯ ಸೀನಿಯರ್ ಗಳಾಗಿದ್ದ ಶ್ರೀಲಾಲ್ , ಜುರೈಜ್, ಹಾಗೂ ರಸೆಲ್ ಇದ್ದು ಈ ವೇಳೆ ಶ್ರೀಲಾಲ್ ಜೂನಿಯರ್ ಆದ ನೀವು ಸೀನಿಯರ್ ಆದ ನಮಗೆ ರೆಸ್ಪೆಕ್ಟ್ ಕೊಡಬೇಕೆಂದು, ಅಸಭ್ಯ ಭಾಷೆ ಬಳಸಿ ಗದರಿಸಿದ್ದಾರೆ. ಇದಾದ ಬಳಿಕ ರಾತ್ರಿ   ಕ್ಕೆ ವಿದ್ಯಾರ್ಥಿ ಉಳಿದುಕೊಂಡಿದ್ದ ಅತ್ತಾವರದ ಕಿಂಗ್ಸ್ ಕೋರ್ಟ್ ಅಪಾರ್ಟ್ ಮೆಂಟ್ ಮಾರಕಾಯುಧಗಳೊಂದಿಗೆ ಅಕ್ರಮ ಪ್ರವೇಶ ಮಾಡಿ, ಗದರಿಸಿ ಅರೆನಗ್ನಗೊಳಿಸಿ ಅಸಭ್ಯ ಭಾಷೆ ಬಳಸಿ ರ‍್ಯಾಗಿಂಗ್ ಮಾಡಿ ಹಲ್ಲೆ ನಡೆಸಿದ್ದಾರೆ ಮತ್ತು ಲಿಮ್ಸ್‌ ಎಂಬ ವಿದ್ಯಾರ್ಥಿ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


Spread the love