ಕುಂದಾಪುರ: ಅರಣ್ಯಾಧಿಕಾರಿಗಳಿಂದ ಎರಡೂವರೆ ತಿಂಗಳು ಪ್ರಾಯದ ಹೆಣ್ಣು ಚಿರತೆ ಮರಿಯ ರಕ್ಷಣೆ

Spread the love

ಕುಂದಾಪುರ: ಅರಣ್ಯಾಧಿಕಾರಿಗಳಿಂದ ಎರಡೂವರೆ ತಿಂಗಳು ಪ್ರಾಯದ ಹೆಣ್ಣು ಚಿರತೆ ಮರಿಯ ರಕ್ಷಣೆ

ಕುಂದಾಪುರ : ಕಂದಾವರ ಗ್ರಾಪಂ ವ್ಯಾಪ್ತಿಯ ಒಪ್ತಿ ಎಂಬಲ್ಲಿರುವ ಕುಂದಾಪುರ ಪುರಸಭೆಯ ಕುಡಿಯುವ ನೀರಿನ ಶುದ್ದೀಕರಣ ಯೋಜನೆ ಘಟಕದ ಆವರಣದಲ್ಲಿ ಓಡಾಡುತ್ತಿದ್ದ ಚಿರತೆ ಮರಿಯನ್ನು ಕುಂದಾಪುರ ಅರಣ್ಯ ಅಧಿಕಾರಿಗಳ ತಂಡ ಇಂದು ಕಾರ್ಯಾಚರಣೆಯ ಮೂಲಕ ರಕ್ಷಿಸಿದೆ.

ಘಟಕದ ಆವರಣದಲ್ಲಿ ಚಿರತೆಗಳ ಓಡಾಟ ಕಂಡ ಘಟಕದ ಸಿಬ್ಬಂದಿ ಜ.14 ರಾತ್ರಿ ಪುರಸಭೆ ಮುಖ್ಯಾಧಿಕಾರಿ ಮೂಲಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ತಕ್ಷಣ ಕಾರ್ಯಪ್ರವೃತ್ತರಾದ ಅರಣ್ಯ ಇಲಾಖೆ ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿತು. ಆದರೆ ಇಂದು ಬೆಳಗ್ಗೆ 10 ಗಂಟೆಗೆ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳ ತಂಡ, ಕೆಲವೇ ಗಂಟೆಯಲ್ಲಿ ಅಂದಾಜು ಎರಡೂವರೆ ತಿಂಗಳು ಪ್ರಾಯದ ಹೆಣ್ಣು ಚಿರತೆ ಮರಿಯೊಂದನ್ನು ರಕ್ಷಣೆ ಮಾಡಿತು. ಇದರೊಂದಿಗೆ ಇದ್ದ ಇನ್ನೊಂದು ಮರಿ ತಪ್ಪಿಸಿಕೊಂಡಿದೆ ಎನ್ನಲಾಗಿದೆ.

ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ರಿಸರ್ಡ್ ಲೋಬೋ, ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಮಾರ್ಗದರ್ಶನದಲ್ಲಿ ಉಪವಲಯ ಅರಣ್ಯಾಧಿಕಾರಿಗಳಾದ ಬಿ.ಉದಯ್, ಅರತ್ ಗಾಣಿಗ, ಹಸ್ತ, ಅರಣ್ಯ ರಕ್ಷಕರಾದ ಉದಯ ಕುಮಾರ್ ಶೆಟ್ಟಿ, ಅಶೋಕ್, ಅರಣ್ಯ ವೀಕ್ಷಕರಾದ ಸತೀಶ್, ರೋಶನ್ ಕಾರ್ಯಾಚರಣೆ ನಡೆಸಿದ್ದಾರೆ.


Spread the love