ಕುಂದಾಪುರ ಉರಿಯಬೇಕಿತ್ತು, ಈ ಮೌನ ಒಳ್ಳೇಯದಲ್ಲ: ಶರಣ್ ಪಂಪ್ವೆಲ್

Spread the love

ಕುಂದಾಪುರ ಉರಿಯಬೇಕಿತ್ತು, ಈ ಮೌನ ಒಳ್ಳೇಯದಲ್ಲ: ಶರಣ್ ಪಂಪ್ವೆಲ್

ಕುಂದಾಪುರ: ಭಯೋತ್ಪಾದಕ ಜಿಹಾದಿ ಅಜೀಜ್‍ನ ಮೋಸದ ಷಡ್ಯಂತರಕ್ಕೆ ಹಿಂದೂ ಯುವತಿ ಶಿಲ್ಪಾ ಬಲಿಯಾಗಿರುವುದು ಖೇದಕರ. ಇಷ್ಟೊಂದು ದೊಡ್ಡ ಘಟನೆ ನಡೆದಿದ್ದರೂ ಕುಂದಾಪುರ ಶಾಂತವಾಗಿದೆ. ಓರ್ವ ಹಿಂದೂ ಹೆಣ್ಣು ಮಗಳು ಮುಸ್ಲಿಂ ಯುವಕನ ದೌರ್ಜನ್ಯಕ್ಕೆ ಕುಗ್ಗಿ ಸಾವನ್ನಪ್ಪಿದ್ದಾಳೆ ಎಂದಾದರೂ ಯಾರೂ ಮಾತನಾಡುವ ಸ್ಥಿತಿಯಲ್ಲಿಲ್ಲ. ಖಂಡಿತವಾಗಿಯೂ ಈ ಮೌನ ಕುಂದಾಪುರಕ್ಕೆ ಒಳ್ಳೇಯದಲ್ಲ. ಇಂತಹ ಗಂಭೀರ ಪ್ರಕರಣದ ವಿರುದ್ದ ಕುಂದಾಪುರದ ಹಿಂದೂ ಸಮಾಜ ಸೆಟೆದು ನಿಂತು ರಸ್ತೆಗಿಳಿದು ಪ್ರತಿಭಟಿಸಬೇಕಿತ್ತು ಎಂದು ವಿಶ್ವ ಹಿಂದೂ ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ಹೇಳಿದರು.

ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಮಂಗಳವಾರ ಸಂಜೆ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕುಂದಾಪುರ ಪ್ರಖಂಡ ವತಿಯಿಂದ ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಉಪ್ಪಿನಕುದ್ರು ಯುವತಿ ಶಿಲ್ಪಾ ಸಾವಿನ ನ್ಯಾಯಕ್ಕಾಗಿ ಆಗ್ರಹಿಸಿ ನಡೆದ ಬೃಹತ್ ಪ್ರತಿಭಟನೆ ಹಾಗೂ ಜನಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಆರು ವರ್ಷಗಳಿಂದ ಆರೋಪಿ ಪ್ರೀತಿ ಪ್ರೇಮದ ನಾಟಕವಾಡಿ ಅಶ್ಲೀಲ ಫೆÇೀಟೊಗಳನ್ನು ತೆಗೆದು ಶಿಲ್ಪಾಳನ್ನು ಬ್ಲಾಕ್‍ಮೇಲ್ ಮಾಡಿ ಅವಳನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದಾನೆ. ಇದು ಆತ್ಮಹತ್ಯೆ ಅಲ್ಲ. ಇದೊಂದು ವ್ಯವಸ್ಥಿತವಾದ ಕೊಲೆ. ಇಂದು ಶಿಲ್ಪಾ ದೇವಾಡಿಗ ಎಂದು ಸುಮ್ಮನಾದರೇ ನಾಳೆ ಲವ್ ಜಿಹಾದ್ ನಮ್ಮ ಮನೆಯ ಅಂಗಳಕ್ಕೆ ಬರುತ್ತದೆ. ಈ ರೀತಿಯ ದೌರ್ಜನ್ಯ ನಡೆಯಬಾರದು ಎಂದಾದರೆ ಹಿಂದೂ ಸಮಾಜ ಎಚ್ಚೆತ್ತುಕೊಳ್ಳಲೇಬೇಕು. ಕಳೆದ 20 ವರ್ಷಗಳಿಂದ ಹಿಂದೂ ಸಂಘಟನೆಗಳು ಲವ್ ಜಿಹಾದ್ ವಿರುದ್ದ ಸಾಕಷ್ಟು ಪ್ರತಿಭಟನೆಗಳನ್ನು ಮಾಡುತ್ತಿದ್ದರೂ,ಇಂದಿಗೂ ಲವ್ ಜಿಹಾದ್ ನಿಂತ ಲಕ್ಷಣ ಕಾಣುತ್ತಿಲ್ಲ ಎಂದರು.

ಬಜರಂಗದಳ ರಾಜ್ಯ ಸಂಚಾಲಕ ಸುನಿಲ್ ಕೆ.ಆರ್, ವಿಹಿಂಪ ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್ ಮಾತನಾಡಿದರು.

ವಿಹಿಂಪ ಕೇಂದ್ರ ವಿಶ್ವಸ್ಥ ಮಂಡಳಿ ಸದಸ್ಯ ಪ್ರೇಮಾನಂದ ಶೆಟ್ಟಿ ಕಟ್ಕೆರೆ, ಬಜರಂಗದಳ ವಿಭಾಗ ಸಂಯೋಜಕ ಭುಜಂಗ ಕುಲಾಲ್, ವಿಹಿಂಪ ಜಿಲ್ಲಾ ಉಪಾಧ್ಯಕ್ಷ ಶ್ರೀಧರ ಬಿಜೂರು, ಮಾತೃಶಕ್ತಿ ಪ್ರಮುಖ್ ಪೂರ್ಣಿಮಾ ಸುರೇಶ್, ಮೃತ ಶಿಲ್ಪಾಳ ಸಹೋದರ ರಾಘವೇಂದ್ರ ದೇವಾಡಿಗ, ಮುಖಂಡರಾದ ಗಿರೀಶ್ ಕುಂದಾಪುರ, ಸುಧೀರ್ ಮೇರ್ಡಿ, ಗುರುರಾಜ್ ಸಂಗಮ್, ವಸಂತ ಸಂಗಮ್, ಪ್ರದೀಪ್ ಮಾರ್ಕೋಡು, ಸುರೇಂದ್ರ ಕೋಟೇಶ್ವರ ಇದ್ದರು.
ಜನಜಾಗೃತಿ ಸಭೆಗೂ ಮುನ್ನ ಹೊಸ ಬಸ್ ನಿಲ್ದಾಣದಿಂದ ಶಾಸ್ತ್ರಿ ಸರ್ಕಲ್ ವರೆಗೆ ಮೆರವಣಿಗೆ ನಡೆಯಿತು. ಪ್ರತಿಭಟನಾ ಸಭೆಯ ಬಳಿಕ ಕುಂದಾಪುರ ಉಪ ವಿಭಾಗದ ಡಿವೈಎಸ್ಪಿ ಶ್ರೀಕಾಂತ ಕೆ ಅವರಿಗೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಹಾಗೂ ಪ್ರಕರಣದ ಸಮಗ್ರ ತನಿಖೆಗೆ ಆಗ್ರಹಿಸಿ ಮನವಿ ನೀಡಲಾಯಿತು.


Spread the love